janadhvani

Kannada Online News Paper

20 ದೇಶಗಳಿಂದ ಸೌದಿ ಅರೇಬಿಯಾಕೆ ಪ್ರವೇಶ ನಿರ್ಬಂಧ- ಫೆ.3 ರಿಂದ ಜಾರಿ

ರಿಯಾದ್, ಫೆ.2- ಕರೋನವೈರಸ್ ಸಾಂಕ್ರಾಮಿಕ ರೋಗವು ಮತ್ತೆ ವ್ಯಾಪಕಗೊಳ್ಳುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಭಾರತ, ಯುಎಇ ಸಮೇತ 20 ದೇಶಗಳಿಂದ ಸೌದಿ ನಾಗರಿಕರಲ್ಲದವರಿಗೆ ಸೌದಿ ಅರೇಬಿಯಾ ಪ್ರವೇಶವನ್ನು ತಾತ್ಕಾಲಿಕ ನಿಷೇಧಿಸಲಾಗಿದೆ ಎಂದು ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿ ಸೌದಿ ಪತ್ರಿಕಾ ಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಪಟ್ಟಿಯಲ್ಲಿ ಸೇರಿಸಲಾದ ದೇಶಗಳು ಈ ಕೆಳಗಿನಂತಿವೆ:

ಅರ್ಜೆಂಟೀನಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಯುನೈಟೆಡ್ ಸ್ಟೇಟ್ಸ್, ಇಂಡೋನೇಷ್ಯಾ, ಐರ್ಲೆಂಡ್, ಇಟಲಿ, ಪಾಕಿಸ್ತಾನ, ಬ್ರೆಜಿಲ್, ಪೋರ್ಚುಗಲ್, ಯುನೈಟೆಡ್ ಕಿಂಗ್‌ಡಮ್, ಟರ್ಕಿ, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಲೆಬನಾನ್, ಈಜಿಪ್ಟ್, ಭಾರತ ಮತ್ತು ಜಪಾನ್.

ಫೆ.3 ಬುಧವಾರ ರಾತ್ರಿ 9 ಗಂಟೆಗೆ (ಕೆಎಸ್ಎ ಸಮಯ) ಈ ಕ್ರಮವು ಜಾರಿಗೆ ಬರಲಿದೆ. ಇದು ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಸೌದಿ ಅರೇಬಿಯಾದ ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿದೆ.

ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರ ವಿಮಾನ ಆರಂಭಗೊಳ್ಳದ ಕಾರಣ ಯುಎಇ ಮೂಲಕ ಸೌದಿಗೆ ತೆರಳಲು ಯುಎಇಯಲ್ಲಿ ನಿಗದಿತ ದಿನಗಳ ಕ್ವಾರಂಟೈನ್ ನಲ್ಲಿ ಉಳಿದು ಸೌದಿಗೆ ತೆರಳಲು ಸಿದ್ಧತೆ ನಡೆಸುತ್ತಿರುವ ಹಲವಾರು ಅನಿವಾಸಿ ಭಾರತೀಯರು ಸೌದಿ ಅರೇಬಿಯಾದ ಈ ತೀರ್ಮಾನದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

error: Content is protected !! Not allowed copy content from janadhvani.com