ಅಬುಧಾಬಿ: ಯುಎಇಯಲ್ಲಿ ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ ಎಂದು ಸಾರ್ವಜನಿಕ ಅಭಿಯೋಜನೆ (ಪಬ್ಲಿಕ್ ಪ್ರಾಸಿಕ್ಯೂಶನ್) ಹೇಳಿದೆ. 14 ವರ್ಷದೊಳಗಿನವರೊಂದಿಗಿನ ಲೈಂಗಿಕ ಸಂಭೋಗವನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ. ಪುರುಷನೊಂದಿಗೆ ಬಲವಂತ ಲೈಂಗಿಕ ಸಂಭೋಗಕ್ಕೂ ಮರಣದಂಡನೆ ಶಿಕ್ಷೆಯಾಗಿದೆ.
ಮಕ್ಕಳು ಮತ್ತು ಬಡವರ ರಕ್ಷಣೆಗಾಗಿ ಅಸ್ತಿತ್ವದಲ್ಲಿರುವ ಬಾಲಾಪರಾಧಿ ಕಾನೂನುಗಳ ಜೊತೆಗೆ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುತ್ತದೆ ಎಂದು ಸಾರ್ವಜನಿಕ ಕಾನೂನು ಹೇಳಿದೆ. ಬಲವಂತದಿಂದ ಮಹಿಳೆಯರೊಂದಿಗೆ ಲೈಂಗಿಕ ಸಂಭೋಗ ಮತ್ತು ಬಲವಂತದಿಂದ ಪುರುಷನೊಂದಿಗೆ ಅಸ್ವಾಭಾವಿಕ ಸಂಭೋಗಕ್ಕೆ ಮರಣದಂಡನೆ ಶಿಕ್ಷೆಯಾಗಿದೆ.
ಆದಾಗ್ಯೂ, 14 ವರ್ಷದೊಳಗಿನವರೊಂದಿಗೆ ಲೈಂಗಿಕ ಸಂಭೋಗ ನಡೆಸಿದ್ದಲ್ಲಿ ಬಲತ್ಕಾರದ ಪುರಾವೆ ಅಗತ್ಯವಿಲ್ಲ ಅದನ್ನು ಅತ್ಯಾಚಾವೆಂದು ಗಣಿಸಲಾಗುವುದು . ಮುಗ್ಧತೆ ಮತ್ತು ಬುದ್ಧಿಮಾಂದ್ಯತೆಯನ್ನು ದುರುಪಯೋಗಪಡಿಸಿಕೊಳ್ಳುವ ಲೈಂಗಿಕ ದೌರ್ಜನ್ಯವನ್ನು ಮರಣದಂಡನೆಯ ಅಪರಾಧವೆಂದು ಸಾರ್ವಜನಿಕ ಅಭಿಯೋಜನೆ ಹೇಳಿದೆ.