janadhvani

Kannada Online News Paper

ಯುಎಇ ಯನ್ನು ಅಪಮಾನಿಸಿದ ಇಸ್ರೇಲ್ ಆರೋಗ್ಯ ಮುಖ್ಯಸ್ಥ- ಪ್ರಧಾನಿ ಕಚೇರಿ ವಿಷಾದ

ಯುಎಇಯನ್ನು ಕೆಟ್ಟದಾದ ರೀತಿಯಲ್ಲಿ ಹೇಳಿಕೆ ನೀಡಿದ್ದಕ್ಕೆ ಇಸ್ರೇಲ್ ವಿಷಾದಿಸಿದೆ. ಯುಎಇ ಕೋವಿಡ್ ಅನ್ನು ಹರಡುತ್ತಿದೆ ಎಂಬ ರೀತಿಯಲ್ಲಿ ಇಸ್ರೇಲಿ ಪ್ರತಿನಿಧಿಯೊಬ್ಬರು ನಿನ್ನೆ ಹೇಳಿಕೆ ನೀಡಿದ್ದಾರೆ. ಇದು ವ್ಯಾಪಕ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಇಸ್ರೇಲ್ ವಿಷಾದ ವ್ಯಕ್ತಪಡಿಸಿದೆ.

ಇಸ್ರೇಲ್ ಆರೋಗ್ಯ ಸಚಿವಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಶರೋನ್ ಅಲ್ರೊ ಪ್ರೈಸ್ ಯುಎಇಯನ್ನು ಅಪಹಾಸ್ಯ ಮಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ವಿಷಾದ ವ್ಯಕ್ತಪಡಿಸಿದೆ. ಇದು “ಯಶಸ್ವಿಯಾಗದ ತಮಾಷೆ” ಮತ್ತು ಈ ವಿಷಯದ ಬಗ್ಗೆ ಅಭಿಪ್ರಾಯ ತಿಳಿಸಲು ಶರೋನ್ ಅಲ್ರೊ ರನ್ನು ನೇಮಕ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುಎಇಯೊಂದಿಗಿನ ಎರಡು ವಾರಗಳ ಶಾಂತಿ ಒಪ್ಪಂದದಲ್ಲಿ 70 ವರ್ಷಗಳ ಯುದ್ಧಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಶರೋನ್ ಹೇಳಿಕೆಯಲ್ಲಿ ತಿಳಿಸಿದ್ದರು.ಕೋವಿಡ್ ವಿಸ್ತರಣೆಯ ನಂತರ ಇಸ್ರೇಲ್‌ನ ಬಂಗೂರಿಯನ್ ವಿಮಾನ ನಿಲ್ದಾಣವನ್ನು ಮುಚ್ಚುವ ಸಂಬಂಧಿಸಿದಂತೆ ಈ ಹೇಳಿಕೆಯನ್ನು ನೀಡಿದ್ದರು.

error: Content is protected !! Not allowed copy content from janadhvani.com