ಮಂಗಳೂರು: ಎನ್ ಆರ್ಸಿ ಗೋಲಿಬಾರ್ ಪ್ರಕರಣಗಳಲ್ಲಿ ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯದ ಜನರು ಕಾನೂನಾತ್ಮಕ ಸಂತ್ರಸ್ತರಾಗಿದ್ದಾರೆ, ಪೊಲೀಸರು ಪ್ರಕರಣವನ್ನು ಸಮರ್ಥಿಸುವ ಉದ್ದೇಶದಿಂದ ಮಂಗಳೂರು ಕೇಂದ್ರ ಖಾಝಿ ಯವರ ಮಹಜರು ಹೇಳಿಕೆ ತಿರುಚುವಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿಯೋಗ ಇಂದು ಮಂಗಳೂರಿನಲ್ಲಿ ಆಯೋಗ ಅಧ್ಯಕ್ಷರಾದ ಅಬ್ದುಲ್ ಅಜೀಂ ರವರಿಗೆ ಮನವಿ ಸಲ್ಲಿಸಿತು.
ಇತ್ತೀಚೆಗೆ ಉಜಿರೆಯಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದ ಸಂಭ್ರಮ ವೇಳೆ ನಿರ್ಧಿಷ್ಟ ರಾಜಕೀಯ ಪಕ್ಷದ ಮುಸ್ಲಿಮ್ ಕಾರ್ಯಕರ್ತರು ದೇಶ ದ್ರೋಹಿ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಅಮಾಯಕ ಯುವಕರ ವಿರುದ್ಧ ಸುಳ್ಳು ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿದ ಪೊಲೀಸರ ಕ್ರಮ ವಿರೋಧಿಸಿ, ಸುಳ್ಳು ಪ್ರಕರಣ ಕೈ ಬಿಡಬೇಕೆಂದು ಒತ್ತಾಯಿಸಿ ಮತ್ತು ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯ ಇತ್ಯಾದಿ ವಿಷಯಗಳಲ್ಲಿ ರಾಜ್ಯ ಅಲ್ಪ ಸಂಖ್ಯಾತ ಇಲಾಖೆ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ, ಕೆ.ಅಶ್ರಫ್ ನೇತೃತ್ವದ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿಯೋಗ ಇಂದು ಮಂಗಳೂರಿನಲ್ಲಿ ಆಯೋಗ ಅಧ್ಯಕ್ಷರಾದ ಅಬ್ದುಲ್ ಅಜೀಂ ರವರಿಗೆ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಸಿ.ಎಂ ಮುಸ್ತಫಾ,ಅಹ್ಮದ್ ಬಾವ ಬಜಾಲ್,ಮೊಹಮ್ಮದ್ ಹನೀಫ್.ಯು,ಹಿದಾಯತ್ ಮಾರಿಪಲ್ಲ,ಮೊಹಮದ್ ಸ್ವಾಲಿಹ್ ಬಜ್ಪೆ,ನೌಷಾದ್ ಬಂದರ್ ಮತ್ತಿತರರು ಉಪಸ್ಥಿತರಿದ್ದರು.