ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವಾರ್ಷಿಕ ಕೌನ್ಸಿಲ್ SK ಮಲ್ಟಿ ಪರ್ಪಸ್ ಹಾಲ್ ನಂದರ್ ಪದವುನಲ್ಲಿ ಡಿವಿಶನ್ ಅಧ್ಯಕ್ಷರಾದ ಇಬ್ರಾಹಿಂ ಅಹ್ಸನಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರ.ಕಾರ್ಯದರ್ಶಿ ನೌಫಲ್ ಫರೀದ್ ನಗರ ರವರು ಸ್ವಾಗತಿಸಿ,ವರದಿ ವಾಚಿಸಿದರು.ಕೋಶಾದಿಕಾರಿ ಇಕ್ಬಾಲ್ ಮದ್ಯನಡ್ಕ ರವರು ಲೆಕ್ಕಪತ್ರ ಮಂಡಿಸಿದರು.ಕಾರ್ಯಕ್ರಮವನ್ನು ಕೆ.ಸಿ.ಎಫ್ ನ್ಯಾಷನಲ್ ಕೌನ್ಸಿಲ್ ನಾಯಕರಾದ ಮೂಸ ಹಾಜಿ ಬಸರ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ದ.ಕ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಖಾಮಿಲ್ ಸಖಾಫಿ ಉಳ್ಳಾಲ, ಕೋಶಾದಿಕಾರಿ ಆಬಿದ್ ನಈಮಿ ಕಟ್ಟತ್ತಿಲ ತರಗತಿ ಮಂಡಿಸಿದರು.ನಂತರ ವೆಸ್ಟ್ ಝೋನ್ ನಾಯಕರಾದ ಸಿದ್ದೀಖ್ ಬಜ್ಪೆಯವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಮನ್ಸೂರ್ ಹಿಮಮಿ ಮರಿಕ್ಕಳ , ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಮದನಿ ಹೆಚ್ ಕಲ್ಲು ಹಾಗೂ ಕೋಶಾಧಿಕಾರಿಯಾಗಿ ಅಬೂಸ್ವಾಲಿಹ್ ಹರೇಕಳ ರವರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮಸೂದ್ ಬಾಹಸನಿ ಮಂಜನಾಡಿ ಮತ್ತು ನೌಫಲ್ ಫರೀದ್ ನಗರ .
ಕಾರ್ಯದರ್ಶಿಗಳಾಗಿ ಶರೀಫ್ ಪಾಣೇಲ, ಉಬೈದ್ ಕೊಣಾಜೆ, ಮುನೀರ್ ಕಲ್ಮಿoಜ , ಝೆನುದ್ದೀನ್ ಇರಾ, ಹುಸೈನ್ ಸಖಾಫಿ ಮುಡಿಪು,ನಾಸಿರ್ ಮೋಂಟುಗೋಳಿ ರವರುಆಯ್ಕೆ ಯಾದರು.
ಸಭೆಯಲ್ಲಿ ಜಿಲ್ಲಾ ನಾಯಕರಾದ ತೌಸೀಫ್ ಸಹದಿ, ನವಾಝ್ ಸಖಾಫಿ, ಝೋನ್ ನಾಯಕರಾದ ಝುಹೈರ್ ಮಾಸ್ಟರ್, ಇಲ್ಯಾಸ್ ಪೊಟ್ಟೊಳಿಕೆ ಎಸ್.ವೈ.ಎಸ್ ನಾಯಕರಾದ ಶರೀಫ್ ಸಹದಿ ಅರಫ,ಅಝೀಝ್ ಹೆಚ್.ಕಲ್ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ನೌಶಾದ್ ಮದನಿ ವಂದಿಸಿದರು.