ಮನಾಮ : ಕೆ.ಸಿ.ಎಫ್ ಬಹರೈನ್ ವತಿಯಿಂದ 49 ನೇ ಬಹರೈನ್ ನ್ಯಾಷನಲ್ ಡೇ ಆನ್ ಲೈನ್ ಕಾರ್ಯಕ್ರಮ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರಾದ ವಿಟ್ಟಲ್ ಜಮಾಲುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ರಾಷ್ಟ್ರೀಯ ಸಮಿತಿ ಸಂಘಟನಾಧ್ಯ ಕ್ಷರಾದ ಖಲಂದರ್ ಮುಸ್ಲಿಯಾರ್ ಕಕ್ಕೆಪದವುರವರ ದುಃಆ ದೊಂದಿಗೆ ಕಾರ್ಯಕ್ರಮವು ಚಾಲನೆಗೊಂಡಿತು.
ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತ ಭಾಷಣ ನಡೆಸಿದರು.ಪ್ರಮುಖ ವಾಗ್ಮಿ, ಕರ್ನಾಟಕ ರಾಜ್ಯ ಎಸ್.ವೈ.ಎಸ್ ರಾಜ್ಯಾಧ್ಯಕ್ಷರಾದ ಡಾ.ಎಮ್ಮೆಸ್ಸಂ ಝೈನಿ ಕಾಮಿಲ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ.ಶೈಖ್ ಬಾವ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸಅದಿ ಉಸ್ತಾದ್,ಬಹರೈನ್ ಐ.ಸಿ.ಎಫ್ ಪ್ರಧಾನ ಕಾರ್ಯದರ್ಶಿ ಎಂ.ಸಿ. ಕರೀಂ,ಮನಾಮ ಮಾಜಿ ಎಂ.ಪಿ ಶೈಖ್ ಅಹ್ಮದ್ ಅಬ್ದುಲ್ ವಾಹಿದ್ ಕರಾತ, ಪ್ರೊಫೆಸರ್ ಖಾಲಿದ್ ಮುಬಾರಕ್ ಬಿಂದ್ಯಾನ, ಕೆ.ಸಿ.ಎಫ್ ಬಹರೈನ್ ಉರ್ದು ವಿಂಗ್ ಚೇರ್ಮ್ಯಾನ್ ಗಯಾಝುದ್ದೀನ್ ಮೈಸೂರ್, ಬಹರೈನ್ ಕೆ.ಎನ್. ಆರ್.ಐ ಅಧ್ಯಕ್ಷರಾದ ಲೀಲಾದರ್ ಬೈಕಂಪಾಡಿ, ಇಂಡಿಯನ್ ಕ್ಲಬ್ ಪ್ರೆಸಿಡೆಂಟ್ ಸ್ಟಾಲಿನ್ ಜೋಸೆಫ್, ಮುಸ್ತಫಾ ನಈಮಿ ಮೊಂಟುಗೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿದರು.ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು, ಸಾಂತ್ವನ ಕಾರ್ಯದರ್ಶಿ ಹನೀಫ್ ಜಿ.ಕೆ, ಇಹ್ಸಾನ್ ಕಾರ್ಯದರ್ಶಿ ಹನೀಫ್ ಕಿನ್ಯ,ಆಡಳಿತ ವಿಭಾಗದ ಕಾರ್ಯದರ್ಶಿ ಸವಾದ್ ಉಳ್ಳಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಫಹೀಮ್ ಪೈಂಬಚಾಲ್ ಹಾಗೂ ತಂಡ ಬಹರೈನ್ ರಾಷ್ಟ್ರಗೀತೆಯನ್ನು ಅಲಾಪಿಸಿದರು. ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಭಾಗದ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿ, ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರಾದ ಲತೀಫ್ ಪೆರೋಲಿಯವರು ಧನ್ಯವಾದಗೈದರು. 3 ಸ್ವಲಾತ್ ನೊಂದಿಗೆ ಸಭೆಯು ಮುಕ್ತಾಯಗೊಂಡಿತು.