janadhvani

Kannada Online News Paper

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನೊಳಗೊಂಡ ಹೊಸ ಬಾಬರಿ ಮಸೀದಿ: ಗಣರಾಜ್ಯೋತ್ಸವದಂದು ಶಂಕುಸ್ಥಾಪನೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ದನ್ನಿಪುರ್ ಗ್ರಾಮದಲ್ಲಿರುವ ಐದು ಎಕರ್ ಸ್ಥಳದಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಿರುವ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮ ಭಾರದ ಸಂವಿಧಾನ ಜಾರಿಗೆ ಬಂದ ದಿನವಾದ ಗಣರಾಜ್ಯೋತ್ಸವ ದಿನ ಜನವರಿ 26, 2021 ರಂದು ನಡೆಯಲಿದೆ ಎಂದು IICF ಇದರ ಕಾರ್ಯದರ್ಶಿ ಅಥರ್ ಹುಸ್ಸೈನ್ ತಿಳಿಸಿದರು. ಆರು ತಿಂಗಳ ಹಿಂದೆ ಸುನ್ನಿ ವಕ್ಫ್ ಬೋರ್ಡ್ ಸಮಿತಿಯು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (IICF) ಸ್ಥಾಪಿಸಲಾಗಿತ್ತು.

ಮಸೀದಿಯ ನೀಲನಕ್ಷೆ ತಯಾರಾಗಿದ್ದು ಡಿಸೆಂಬರ್ 19ರಂದು ಅನಾವರಣಗೊಳ್ಳಲಿದೆ. ಹೊಸದಾಗಿ ನಿರ್ಮಾಣಗೊಳ್ಳಲಿರುವ ಮಸೀದಿಯಲ್ಲಿ 300 ಬೆಡ್ ಸಾಮರ್ಥವಿರುವ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ, ಲೈಬ್ರರಿ ಹಾಗೂ ಇನ್ನಿತರ ಸೌಕರ್ಯಗಳನ್ನೊಳಗೊಂಡಿದೆ. ಒಂದೇ ಸಮಯದಲ್ಲಿ ಸರಿಸುಮಾರು 2000ದಷ್ಟು ಜನರಿಗೆ ನಮಾಝ್ ಮಾಡಲು ಸೌಕರ್ಯಗಳಿರುವ ಹೊಸ ಮಸೀದಿಯೂ ದುಂಡಾದ ಆಕಾರದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಕಟ್ಟಡದ ಮುಖ್ಯ ವಾಸ್ತುಶಿಲ್ಪ ಪ್ರೊಫೆಸರ್ ಎಸ್ ಎಮ್ ಅಖ್ತಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com