ರಿಯಾದ್: ದೀರ್ಘಾವಧಿಯ ಉದ್ಯೋಗ ಒಪ್ಪಂದವನ್ನು ಜಾರಿಗೆ ತರಲು ಯೋಜಿಸಿದೆ ಎಂದು ಸೌದಿ ಕಾರ್ಮಿಕ ಸಚಿವಾಲಯ ಹೇಳಿದೆ. ಹತ್ತು ವರ್ಷಗಳ ಅವಧಿಯೊಂದಿಗೆ ಒಪ್ಪಂದವನ್ನು ಅನುಷ್ಠಾನಗೊಳಿಸುವ ಸಾಧ್ಯತೆಯನ್ನು ಪರಿಶೋಧಿಸಲಾಗುತ್ತಿದೆ.ಕಾರ್ಮಿಕರು ಸಂಸ್ಥೆಗಳನ್ನು ಬದಲಿಸುವುದರಿಂದ ಉಂಟಾಗುವ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಈ ಹೊಸ ಕ್ರಮವನ್ನು ಜಾರಿ ತರಲಾಗುತ್ತದೆ.
ಕಾರ್ಮಿಕ ಕಾಯ್ದೆಯ 83 ನೇ ಉಲ್ಲೇಖವನ್ನು ತಿದ್ದುಪಡಿ ಮಾಡಿ ಯೋಜನೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ. ದೀರ್ಘಾವಧಿಯ ಉದ್ಯೋಗ ಒಪ್ಪಂದಗಳ ಸಾಮರ್ಥ್ಯವನ್ನು ಅಧ್ಯಯನ ಮಾಡಲಾಗುತ್ತಿದೆ. ಸಂಬಂಧಿತ ಒಪ್ಪಂದವು ಹತ್ತು ವರ್ಷಗಳವರೆಗೆ ಇರುತ್ತದೆ ಎಂದು ಕಾರ್ಮಿಕ ಸಚಿವಾಲಯದ ಉಪ ಕಾರ್ಯದರ್ಶಿ, ಎಂಜಿನಿಯರ್ ಹಾನಿ ಅಲ್ ಮುಜಮ್ಮಲ್ ವಿವರಿಸಿದರು.ಪೂರ್ವ ಪ್ರಾಂತೀಯ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಮಿಕರು ಸಂಸ್ಥೆಗಳನ್ನು ಬದಲಿಸುವ ಮೂಲಕ ಉಂಟಾಗುವ ದುರುಪಯೋಗವನ್ನು ತಡೆಯಲು ಕಾನೂನನ್ನು ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ 83 ನೇ ಪ್ಯಾರಾಗ್ರಾಫ್ ಷರತ್ತು ಪ್ರಕಾರ, ಉದ್ಯೋಗದಾತರೊಂದಿಗಿನ ಒಪ್ಪಂದವನ್ನು ಮುಕ್ತಾಯಗೊಳಿಸಿದರೆ, ಅವನೊಂದಿಗೆ ಸ್ಪರ್ಧಿಸುವ ರೀತಿಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಲು ಅನುಮತಿಸುವುದಿಲ್ಲ. ಆದರೆ ಇದನ್ನು ಹೆಚ್ಚಾಗಿ ಗಮನಿಸಲಾಗುವುದಿಲ್ಲ. ಕಂಪನಿಯ ರಹಸ್ಯಗಳು ಸೋರಿಕೆಯಾಗುತ್ತಿವೆ ಮತ್ತು ಅದು ಕಂಪನಿಗಳಿಗೆ ದುಷ್ಪರಿಣಾಮ ಬೀರುತ್ತದೆ ಎಂಬ ದೂರುಗಳ ಆಧಾರದಲ್ಲಾಗಿದೆ ಈ ಬದಲಾವಣೆ.
ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ರಕ್ಷಿಸುವ ರೀತಿಯಲ್ಲಿ ಹತ್ತು ವರ್ಷಗಳ ಒಪ್ಪಂದವನ್ನು ಜಾರಿಗೆ ತರಲಾಗುವುದು. ಉದ್ಯೋಗದಾತನು ಒಪ್ಪಂದವನ್ನು ಅನುಸರಿಸದಿದ್ದರೆ, ಪ್ರಾಯೋಜಕತ್ವವನ್ನು ಬದಲಾಯಿಸಲು ಕಾರ್ಮಿಕನಿಗೆ ಅವಕಾಶ ನೀಡಲಾಗುವುದು ಎಂದು ಅಂಡರ್ ಸೆಕ್ರೆಟರಿ ಹೇಳಿದರು. ಆದರೆ, ಕೆಲಸಗಾರನು ಒಪ್ಪಂದಕ್ಕೆ ಬದ್ಧನಾಗಿರದಿದ್ದರೆ, ನಂತರ ಅದೇ ಕಂಪನಿಗೆ ಮಾತ್ರ ಬರಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.