ತನ್ನ ಸಾಧನೆ ಮೂಲಕ ಮತ್ತೊಮ್ಮೆ ಕಡಬದ ಹೆಸರನ್ನು ಮಿಂಚುವಂತೆ ಮಾಡಿದ ಹಳ್ಳಿಯ ಯುವ ಪ್ರತಿಭೆ
ತನ್ನ ವಿಭಿನ್ನ ಬರಹ ಶೈಲಿಯ ಮೂಲಕ ಸಾಹಿತ್ಯ ಲೋಕದ ವಿವಿಧ ಮಜಲುಗಳಲ್ಲಿ ಹೆಜ್ಜೆಯನ್ನಿಡುತ್ತಾ ಧ್ವನಿಸುತ್ತಿರುವ ದಕ್ಷಿಣ ಕನ್ನಡ ,ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಯುವ ಪ್ರತಿಭೆ ಇದೀಗ ಚುಟುಕು ಸಾಹಿತ್ಯದಲ್ಲೂ ತನ್ನ ಬರವಣಿಗೆ ತೋರ್ಪಡಿಸಿ ಸೈ ಎನಿಸಿಕೊಂಡಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ ) ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಜಿಲ್ಲಾ ಘಟಕ ಯಾದಗಿರಿಯ ಪ್ರಾಯೋಜಕತ್ವದಲ್ಲಿ ನವೆಂಬರ್ 22 , 23 ಮತ್ತು 24 ರಂದು ಅಂತರ್ಜಾಲದ ಮುಖೇನ ಅಂತರ್ರಾಜ್ಯ ಮಟ್ಟದಲ್ಲಿ ಚುಟುಕು ಸಾಹಿತ್ಯ ರಚನೆ ಮತ್ತು ವಾಚನ ಸ್ಪರ್ಧೆಯು ಯಶಸ್ವಿಯಾಗಿ ನಡೆದಿದ್ದು ಇದರಲ್ಲಿ ನೂಜಿಬಾಳ್ತಿಲ ಗ್ರಾಮದ ಸಮ್ಯಕ್ತ್ ಜೈನ್ ರವರು ದ್ವಿತೀಯ ಸ್ಥಾನವನ್ನು ಪಡೆದಿದ್ದು , ತನ್ನ ಊರಿನ ಹೆಸರನ್ನು ಮತ್ತೊಮ್ಮೆ ಅಂತರ್ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ .
ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದು ಹಲವಾರು ಕೃತಿಗಳನ್ನು ರಚಿಸಿರುವ ಇವರು ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರ .
ಇನ್ನಷ್ಟು ಸುದ್ದಿಗಳು