ಬೆಳಗಾವಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಬೆಳಗಾವಿ ಜಿಲ್ಲಾ ಸಮಿತಿಯನ್ನು ರಾಜ್ಯ ಪ್ರಭಾರ ಅಧ್ಯಕ್ಷರ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಸಯ್ಯಿದ್ ಝೈನುಲ್ ಆಬಿದೀನ್ ಬೆಳಗಾವಿ ಸಭೆಯನ್ನು ಉದ್ಘಾಟಿಸಿದರು. ಅಲ್ ಹಾಜ್ ಹಾಶಿಂ ಸಾಹೇಬ್ ಹಾಗೂ ಮುಷ್ತಾಕ್ ಅಹ್ಮದ್ ಬೆಳಗಾಂ ಜಿಲ್ಲಾ ನಾಯಕರಿಗೆ ಧ್ವಜ ಹಸ್ತಾಂತರ ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಮುನೀರ್ ಸಖಾಫಿ ಉಳ್ಳಾಲ, ಶರೀಫ್ ಸರ್ ಕೊಡಗು, ಸಫ್ವಾನ್ ಚಿಕ್ಕಮಗಳೂರು ಮಾತನಾಡಿದರು.
ಬೆಳಗಾವಿ ಜಿಲ್ಲೆಯ ಮೊದಲ ಅಧ್ಯಕ್ಷರಾಗಿ ಮೌಲಾನಾ ಸಾಜಿದ್ ಅಹ್ಮದ್ ಗೋಕಾಕ್ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಸಾಹೇಬ್ ಉಜ್ವಲ್ ನಗರ, ಕೋಶಾಧಿಕಾರಿಯಾಗಿ ಇಂಜಿನಿಯರ್ ಶುಹೈಬ್ ರಝಾರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದೀನ್ ಬೆಳಗಾವಿ, ಮೆಹಬೂಬ್ ಸುಬ್ಹಾನಿ ಬೈಲಹೊಂಗಲ, ಮೌಲಾನಾ ಅಝೀಂ ಸಅದಿ ಬೆಳಗಾಂ, ಕಾರ್ಯದರ್ಶಿಗಳಾಗಿ ಅಝೀಂ ರಾಮದುರ್ಗ, ಮೆಹಬೂಬ್ ಸುಬ್ಹಾನಿ ಉಜ್ವಲ್ ನಗರ, ಇಂಜಿನಿಯರ್ ಝುಬೈರ್ ಮುಲ್ಲಾ ಗೋಕಾಕ್ ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಕಾರ್ಯದರ್ಶಿಗಳಾದ ಅಶ್ರಫ್ ಆಮ್ಜದಿ ಉಡುಪಿ, ಇಸ್ಮಾಯಿಲ್ ಮಾಸ್ಟರ್ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಮುಬಶ್ಶಿರ್ ಅಹ್ಸನಿ, ಮುನೀರ್ ಮದನಿ ಮೈಸೂರು, ರಫೀಕ್ ಮಾಸ್ಟರ್ ಕೊಡಗು, ಕಬೀರ್ ಅಮ್ಜದಿ ಉಪಸ್ಥಿತರಿದ್ದರು.