ಸುನ್ನೀ ಯುವಜನ ಸಂಘ( SYS) ಸವಣೂರು ಸೆಂಟರ್ ಇದರ ಆಶ್ರಯದಲ್ಲಿ COUNT -20ಸೆಂಟರ್ ಕೌನ್ಸಿಲ್ ಕ್ಯಾಂಪ್ ಪಣೆಮಜಲು ಇಬ್ರಾಹಿಂ ರವರ ಮದೀನಾ ಮಂಝಿಲ್ ನಲ್ಲಿ ವಿಜ್ರಂಭಣೆಯಿಂದ ಜರಗಿತು.
ಸೆಂಟರ್ ಅಧ್ಯಕ್ಷರಾದ ಅಶ್ರಪ್ ಕಾಮಿಲ್ ಸಖಾಫಿ ಸವಣೂರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದ ಉದ್ಘಾಟನೆಯನ್ನು SYS ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಮಜೂರು ಸಅದಿ ಉಸ್ತಾದ್ ನೆರವೇರಿಸಿದರು. ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಸುರಿಬೈಲು, SYS ಯಾಕೆ ಮತ್ತು ಹೇಗೆ ಎಂಬ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ನರಿಮೊಗರು, ಸವಣೂರು, ಕೂರ, ಬೈತ್ತಡ್ಕ, ಬೆಳಂದೂರು, ವೀರಮಂಗಿಲ ಶಾಖೆಗಳಿಂದ ಎಲ್ಲಾ ಕೌಂಸಿಲ್ ಗಳು,ಕರ್ನಾಟಕ ಮುಸ್ಲಿಂ ಜಮಾಅತ್ ಸವಣೂರು ವಲಯ ಪ್ರಧಾನ ಕಾರ್ಯದರ್ಶಿ ಯಸ್ಸೀಯೆ ಸೊಂಪಾಡಿ ಸಂಘಟನಾ ಕಾರ್ಯದರ್ಶಿ ಹೈದರಲಿ ಐವತೊಕ್ಲು ಎಂ ಎ ರಫೀಖ್, ಸೀಯೆ ನಝೀರ್, ಊರಿನ ಗಣ್ಯರು, ಉಲಮಾಗಳು ಭಾಗವಹಿದರು.ಸೆಂಟರ್ ಕಾರ್ಯದರ್ಶಿ ಅಬ್ಬಾಸ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.ಕೊನೆಯಲ್ಲಿ ಶೀರಣಿ ವಿತರಣೆ ನಡೆಯಿತು.