ನವದೆಹಲಿ: ಇತ್ತೀಚಿನ ಮಾಹಿತಿಯ ಪ್ರಕಾರ ಒಂದೇ ದಿನದಲ್ಲಿ 44,879 ಹೊಸ ಪ್ರಕರಣಗಳು (ಕೋವಿಡ್ -19) ವರದಿಯಾದ ನಂತರ, ದೇಶದಲ್ಲಿ ಕರೋನಾ ಸೋಂಕು ಪ್ರಕರಣಗಳು ಶುಕ್ರವಾರ 87.28 ಲಕ್ಷಕ್ಕೆ ಏರಿದೆ. ಅದೇ ಸಮಯದಲ್ಲಿ 81,15,580 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ರೋಗಿಗಳ ಚೇತರಿಕೆಯ ಪ್ರಮಾಣವು ಶೇಕಡಾ 92.97ಕ್ಕೆ ಏರಿದೆ. ಏತನ್ಮಧ್ಯೆ ಭಾರತದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೊಳ್ಳಲಿದೆ ಎಂಬ ವರದಿಗಳು ಹರಿದಾಡುತ್ತಿವೆ.
ದೇಶದಲ್ಲಿ ಕರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಡಿಸೆಂಬರ್ 1 ರಿಂದ ಮತ್ತೆ ಲಾಕ್‌ಡೌನ್ ಆಗಲಿದೆ ಎಂಬ ವರದಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಏತನ್ಮಧ್ಯೆ ಲಾಕ್‌ಡೌನ್ ಮತ್ತೆ ಜಾರಿಯಾಗಲಿದೆಯೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿದೆ.
ಈ ವೈರಲ್ ಟ್ವೀಟ್ ಅನ್ನು ತನಿಖೆ ಮಾಡಿದಾಗ ಈ ಮಾಹಿತಿಯು ಸುಳ್ಳು ಎಂದು ತಿಳಿದುಬಂದಿದೆ. ಈ ನಕಲಿ ಟ್ವೀಟ್ ಅನ್ನು ಪಿಐಬಿ ಫ್ಯಾಕ್ಟ್ ಚೆಕ್ ತಂಡವು ತನಿಖೆ ಮಾಡಿದೆ. ಪಿಐಬಿ ಫ್ಯಾಕ್ಟ್-ಚೆಕ್ ತಂಡದ ಪ್ರಕಾರ ಸರ್ಕಾರವು ಅಂತಹ ಯಾವುದೇ ಘೋಷಣೆ ಮಾಡಿಲ್ಲ. ಪಿಐಬಿಯ ಫ್ಯಾಕ್ಟ್ ಚೆಕ್ ತಂಡವು ಈ ಟ್ವೀಟ್ ಮಾರ್ಫೆಡ್ (Morphed) ಆಗಿದೆ ಮತ್ತು ಅಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
A tweet allegedly posted by a prominent media outlet claims that due to the growing number of #COVID19 cases in the country, the Govt. is going to re-impose a nationwide lockdown from 1st December#PIBFactCheck: This tweet is #Morphed. No such decision has been taken by the Govt pic.twitter.com/8Urg7ErmEH
— PIB Fact Check (@PIBFactCheck) November 12, 2020
ಅಂತರ್ಜಾಲದಲ್ಲಿ ನಕಲಿ ಸುದ್ದಿ ಮತ್ತು ವದಂತಿಗಳನ್ನು ತಡೆಗಟ್ಟಲು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) 2019 ರ ಡಿಸೆಂಬರ್‌ನಲ್ಲಿ ಈ ಸತ್ಯ ಪರಿಶೀಲನಾ ವಿಭಾಗವನ್ನು ಪ್ರಾರಂಭಿಸಿತು. ಸರ್ಕಾರದ ನೀತಿಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ ಅಂತರ್ಜಾಲದಲ್ಲಿ ಹರಡಿರುವ ತಪ್ಪು ಮಾಹಿತಿಯನ್ನು ನಿಗ್ರಹಿಸುವುದು ಇದರ ಉದ್ದೇಶ.