ತೊಕ್ಕೊಟ್ಟು ( ನ 11) : ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟ ಇದರ ಆಶ್ರಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ, ದಲಿತ, ಕಾರ್ಮಿಕ ಹಾಗೂ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಸುಳ್ಯದ ಕಲ್ಲುಗುಂಡಿಯಿಂದ ಮಂಗಳೂರು ವರೆಗೆ ನಡೆಯುವ ವಾಹನ ಜಾಥಾವನ್ನು ದಿನಾಂಕ 22.11.2020 ರಂದು ಉಳ್ಳಾಲ ವಲಯ ವ್ಯಾಪ್ತಿಯಲ್ಲಿ ಸ್ವಾಗತಿಸುವ ಸಲುವಾಗಿ ಸಿಐಟಿಯು, ರೈತ ಸಂಘ, DYFI , CWFI, ದಲಿತ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘಟನೆ, ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ ಯೂನಿಯನ್, ಅಖಿಲ ಭಾರತ ಕಿಸಾನ್ ಸಭಾ ಮುಖಂಡರುಗಳ ಸಭೆ ತೊಕ್ಕೊಟ್ಟು ಸಿಪಿಐಎಂ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಉಳ್ಳಾಲ ವಲಯ ರೈತ ಸಂಘದ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್ ವಹಿಸಿದ್ದರು. ಸಭೆಯನ್ನುದ್ದೇಶಿಸಿ ರೈತ ಸಂಘದ ಜಿಲ್ಲಾ ನಾಯಕ ಯಾದವ ಶೆಟ್ಟಿ, ಸಮುದಾಯ ಸಂಘಟನೆಯ ವಾಸುದೇವ್ ಉಚ್ಚಿಲ್, ಅಖಿಲ ಭಾರತ ಕಿಸಾನ್ ಸಭಾದ ಸಂಜೀವ ಪಿಲಾರ್, ಕೋಟೆಕಾರ್ ಸರ್ಕಲ್ ರೈತ ಸಂಘದ ಕಾರ್ಯದರ್ಶಿ ಜಯಂತ್ ಅಂಬ್ಲಮೊಗರು ಮಾತನಾಡಿದರು. ದಿನಾಂಕ 22.11.2020 ಭಾನುವಾರದಂದು ಮುಡಿಪು ಮೂಲಕ ತೊಕ್ಕೊಟ್ಟುವಿಗೆ ಆಗಮಿಸಲಿರುವ ಜಾಥಾವನ್ನು ಬೈಕ್ ರ್‍ಯಾಲಿ ಮೂಲಕ ಸ್ವಾಗತಿಸಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವಾಗತ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕೆಳಗಿನಗುತ್ತು,, ಅಧ್ಯಕ್ಷರು, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ, ಕಾರ್ಯದರ್ಶಿಯಾಗಿ ರೈತ ಸಂಘದ ಜಯಂತ್ ಅಂಬ್ಲಮೊಗರು, ಕೋಶಾಧಿಕಾರಿಯಾಗಿ ರೈತಸಂಘದ ಕೇಶವ ಕುಂದರ್ ಅವರನ್ನು ಆಯ್ಜೆ ಮಾಡಲಾಯಿತು.
ಸಭೆಯಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ್ ಕುತ್ತಾರ್, ಕಾರ್ಯದರ್ಶಿ ಚಂದ್ರಹಾಸ್ ಪಿಲಾರ್, ಬೀಡಿ ಯೂನಿಯನ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ವಿಲಾಸಿನಿ ತೊಕ್ಕೊಟ್ಟು, ದಲಿತ ಹಕ್ಕುಗಳ ಸಮಿತಿಯ ನಾರಾಯಣ ತಲಪಾಡಿ, ಸಿಪಿಐಎಂ ಮುಖಂಡ ಮಹಾಬಲ ದೆಪ್ಪಲಿಮಾರ್, ಅರುಣ್ ಉಳ್ಳಾಲ್, ರಝಾಕ್ ಮೊಂಟೆಪದವು , ರಝಾಕ್ ಮುಡಿಪು, ಶೇಖರ್ ಕುತ್ತಾರ್, ಲೋಕಯ್ಯ ಪನೀರ್ , ಜಯ ಶೆಟ್ಟಿ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.