janadhvani

Kannada Online News Paper

ತಾಜುಲ್ ಫುಖಹಾಅ್ ಮಖ್ಬರ ಝಿಯಾರತ್ ನೊಂದಿಗೆ ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ತಾಜುಲ್ ಫುಖಹಾಅ್ ಶೈಖುನಾ ಬೇಕಲ್ ಉಸ್ತಾದರ ಮಖ್ಬರ ಝಿಯಾರತ್ ನೊಂದಿಗೆ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ಮರಿಕ್ಕಳ ಯುನಿಟ್ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ ಎಸ್ಸೆಸ್ಸೆಫ್ ಮರಿಕ್ಕಳ ಅಧ್ಯಕ್ಷ ಅಝರುದ್ದೀನ್ ರವರಿಗೆ ಸದಸ್ಯತನ ನೀಡುವುದರ ಮೂಲಕ ಚಾಲನೆ ನೀಡಿದರು.ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ರಾಜ್ಯ ನಾಯಕ ಸಫ್ವಾನ್ ಚಿಕ್ಕಮಂಗಳೂರು,ಮರಿಕ್ಕಳ ಜಮಾಅತ್ ಅಧ್ಯಕ್ಷ ಅಬ್ಬಾಸ್ ಕೊಡಂಚಲ್,ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು,ಕೋಶಾಧಿಕಾರಿ ಹನೀಫ್ ಚಂದಹಿತ್ತಿಲು,ಎಸ್ಸೆಸ್ಸೆಫ್ ಮೋಮಟುಗೋಳಿ ಸೆಕ್ಟರ್ ಅಧ್ಯಕ್ಷ ಮನ್ಸೂರು ಹಿಮಮಿ, ಮುಸ್ಲಿ ಜಮಾಅತ್ ಉಳ್ಳಾಲ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಎಸ್.ವೈ.ಎಸ್ ಮರಿಕ್ಕಳ ಅಧ್ಯಕ್ಷ ಆಲಿಕುಂಞಿ ಮೋಂಟುಗೋಳಿ,ನರಿಂಗಾನ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಅಬ್ದುರ್ರಹ್ಮಾನ್ ಚಂದಹಿತ್ಲು ಮೊದಲಾದವರು ಉಪಸ್ಥಿತರಿದ್ದರು.