janadhvani

Kannada Online News Paper

ಚಳಿಗಾಲದಲ್ಲಿ ಕೋವಿಡ್ ಎರಡನೇ ಅಬ್ಬರ ಸಾಧ್ಯತೆ- ಎಚ್ಚರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಿನ ರಾಜ್ಯಗಳಲ್ಲಿ ಸ್ಥಿರವಾಗಿರುವುದರಿಂದ ಕಳೆದ ಮೂರು ವಾರಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿರುವ ನೀತಿ ಆಯೋಗದ ಸದಸ್ಯ ವಿ. ಕೆ. ಪೌಲ್, ಚಳಿಗಾಲದಲ್ಲಿ ಎರಡನೇ ಅಲೆ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ.

ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ತಜ್ಞರ ಸಮನ್ವಯದ ಮುಖ್ಯಸ್ಥರೂ ಆಗಿರುವ ಪೌಲ್, ಒಮ್ಮೆ ಕೋವಿಡ್-19 ಲಸಿಕೆ ಲಭ್ಯವಾದರೆ, ಅದನ್ನು ನಾಗರಿಕರಿಗೆ ತಲುಪಿಸಲು ಸಾಕಷ್ಟು ಸಂಪನ್ಮೂಲಗಳಿವೆ ಎಂದು ಹೇಳಿದರು.

ದೇಶದಲ್ಲಿ ಕಳೆದ ಮೂರು ವಾರಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳ ಸಂಖ್ಯೆ ಕುಸಿದಿದೆ.ಆದರೂ, ಕೇರಳ, ಕರ್ನಾಟಕ, ರಾಜಸ್ಥಾನ, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಮತ್ತು ಮೂರ್ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಲೂ ಸಹ ಸೋಂಕು ಹೆಚ್ಚಾಗುತ್ತಿದೆ ಎಂದು ಪೌಲ್ ತಿಳಿಸಿದರು.

ಪೌಲ್ ಪ್ರಕಾರ, ದೇಶ ಈಗ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ ಆದರೆ, ದೇಶವು ಇನ್ನೂ ಬಹಳ ದೂರ ಸಾಗಬೇಕಿದೆ ಏಕೆಂದರೆ ಶೇ. 90 ರಷ್ಟು ಜನರು ಇನ್ನೂ ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ಚಳಿಗಾಲದ ಆರಂಭದೊಂದಿಗೆ ಎರಡನೇ ಅಲೆಯನ್ನು ನೋಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೌಲ್, ಯುರೋಪಿನ ರಾಷ್ಟ್ರಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಕಂಡುಬರುತ್ತಿರುವುದನ್ನು ನೋಡುತ್ತಿದ್ದೇವೆ. ದೇಶದಲ್ಲಿ ಎರಡನೇ ಅಲೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಈ ಸೋಂಕಿನ ಬಗ್ಗೆ ಇನ್ನೂ ತಿಳಿಯುತ್ತಿರುವುದಾಗಿ ತಿಳಿಸಿದರು.

error: Content is protected !! Not allowed copy content from janadhvani.com