janadhvani

Kannada Online News Paper

ರಾಮ ಜನ್ಮಭೂಮಿ ಬಳಿಕ ಕೃಷ್ಣ ಜನ್ಮಭೂಮಿ ವಿವಾದ- ಮಥುರಾ ಮಸೀದಿ ವಿಚಾರಣೆಗೆ ಕೋರ್ಟ್ ಸಮ್ಮತಿ

ಮಥುರಾ, ಯುಪಿ: ಶ್ರೀಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಇರುವ ದೇಗುಲಕ್ಕೆ ಹೊಂದಿಕೊಂಡಂತೆಯೇ ಮಸೀದಿಯೊಂದು ಇದೆ. ಈ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಸಲ್ಲಿಸಲಾದ ಅರ್ಜಿಯನ್ನು ಮಥುರಾ ಕೋರ್ಟ್‌ ವಿಚಾರಣೆಗೆ ಸ್ವೀಕರಿಸಿದೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ವಿವಾದ ಬಗೆಹರಿದ ಬೆನ್ನಲ್ಲೇ, ಮಥುರಾ ವಿವಾದದ ಬಗ್ಗೆ ಕೆಲವು ನಾಯಕರು ಗಮನ ಸೆಳೆದಿದ್ದರು. ಶತಮಾನಗಳಿಂದ ಚರ್ಚೆಯಲ್ಲಿರುವ ಈ ವಿಚಾರ, ರಾಮಜನ್ಮಭೂಮಿ ವಿವಾದ ಇತ್ಯರ್ಥದ ಬಳಿಕ ಮುನ್ನಲೆಗೆ ಬಂದಿತ್ತು.

ಇದೀಗ ಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡಂತೆಯೇ ಇರುವ ಮಸೀದಿ ತೆರವಿಗೆ ನ್ಯಾಯಾಂಗ ಸಮರ ಆರಂಭವಾಗಿದ್ದು, ಅರ್ಜಿಯ ವಿಚಾರಣೆಗೆ ಕೋರ್ಟ್‌ ಕೂಡಾ ಸಮ್ಮತಿಸಿದೆ. ಹೀಗಾಗಿ, ಪ್ರಕರಣದ ವಿಚಾರಣೆ ಭಾರೀ ಕುತೂಹಲ ಕೆರಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 18ಕ್ಕೆ ನಿಗದಿಪಡಿಸಲಾಗಿದೆ.

error: Content is protected !! Not allowed copy content from janadhvani.com