ದೋಹಾ, ಅ.14: ಅಲ್ ವಸ್ಮಿ ಎಂದು ಕರೆಯಲ್ಪಡುವ ಈ ವರ್ಷದ ಮಳೆಗಾಲ ಶುಕ್ರವಾರದಿಂದ ಪ್ರಾರಂಭವಾಗಲಿದೆ ಎಂದು ಕತರ್ ಹವಾಮಾನ ಇಲಾಖೆ ತಿಳಿಸಿದೆ. ಈ ಋತುವಿನಲ್ಲಿ 52 ದಿನಗಳವರೆಗೆ ಮಳೆ ಬೀಳುವ ಸಾಧ್ಯತೆ ಇದೆ.
ಇದು ಹೆಲಿಯಂಥಮ್ ಮತ್ತು ಜೆರೇನಿಯಂ ಹೂಗಳ ಕೃಷಿಗೆ ಸಹಕಾರಿಯಾಗುವ ಮಳೆ ಆಗಿರುವುದರಿಂದ ಅಲ್ ವಸ್ಮಿ ಎಂಬ ಹೆಸರಿಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಈ ವರ್ಷ ಚೆನ್ನಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಗಲಿನಲ್ಲಿ, ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ರಾತ್ರಿ ವೇಳೆಯಲ್ಲಿ ತಂಪು ಹೆಚ್ಚಾಗಲಿದೆ.
ಹವಾಮಾನ ವೈಪರೀತ್ಯದ ಕಾರಣ ಸಂಭವಿಸಬಹುದಾದ ಜ್ವರ ಸೇರಿದಂತೆ ರೋಗಗಳ ಬಗ್ಗೆ ಗಮನಹರಿಸಬೇಕೆಂದು ಹವಾಮಾನ ಇಲಾಖೆ ಜನರಿಗೆ ಸೂಚಿಸಿದೆ. ಅಗತ್ಯವಾದ ರೋಗನಿರೋಧಕಗಳನ್ನು ತೆಗೆದುಕೊಳ್ಳುವುದು, ಕೈಗಳನ್ನು ಸದಾ ಸಮಯದಲ್ಲೂ ಅಣುಮುಕ್ತ ಗೊಳಿಸುವುದು, ರೋಗಿಗಳಿಂದ ದೂರವಿರುವುದು ಸಹ ಮುಖ್ಯವಾಗಿದೆ.