janadhvani

Kannada Online News Paper

ಮಾಣಿ : ಇಲ್ಲಿನ ರಿಕ್ಷಾ ಚಾಲಕರ ಸಂಘ ಸಿಐಟಿಯು ವತಿಯಿಂದ ಪುತ್ತೂರು ಟ್ರಾಫಿಕ್ ಠಾಣೆಗೆ ಅಗತ್ಯ ಮನವಿಯನ್ನು ಸಲ್ಲಿಸಲಾಯಿತು.ರೋಗಿ ಗಳನ್ನು ಆಸ್ಪತ್ರೆಗೆ ದಾಖಲಿಸಲು ಗರ್ಭಿಣಿಯರನ್ನು ತಪಾಸಣೆಗಾಗಿ ಕರೆದೊಯ್ಯಲು ಮುಂತಾದ ಅತೀ ಅಗತ್ಯ ವಿಷಯಗಳಿಗೆ ಮಾಣಿಯ ರಿಕ್ಷಾಗಳನ್ನು ಪುತ್ತೂರು ಪ್ರವೇಶಿಸಲು ಬಿಡಬೇಕು ಎಂಬಿತ್ಯಾದಿ ವಿಷಯಗಳನ್ನೊಳಗೊಂಡ ಮನವಿಯನ್ನು ಪುತ್ತೂರು ಟ್ರಾಫಿಕ್ ಠಾಣೆಯ ಎಸ್ ಐ ರಾಮ ನಾಯ್ಕರವರಿಗೆ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಠಾಣಾಧಿಕಾರಿಗಳು ಕೂಡಲೇ ಸ್ಪಂದಿಸಿ ಸಮ್ಮತಿಯನ್ನು ಸೂಚಿಸಿದರು.ನಿಯೋಗದಲ್ಲಿ ಸಂಘದ ಗೌರವಾಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ,ಅಧ್ಯಕ್ಷ ಅಬ್ದುಲ್ ಅಝೀಝ್ ಮಾಣಿ,ಕಾರ್ಯದರ್ಶಿ ಬದ್ರುದ್ದೀನ್ ಇನಾಮ್ ಮಾಣಿ,ಮತ್ತು ದಯಾನಂದ ಕೊಡಾಜೆ,ರವಿ ಮಾಣಿ,ಕಿರಣ್ ಮಾಣಿ,ಅಶ್ರಫ್ ಮಾಣಿ,ಚಂದ್ರಹಾಸ ಮಾಣಿ,ಅಬ್ಬು ಹಳೀರ,ಹರೀಶ ಮಾಣಿ,ವಸಂತ ಮಾಣಿ,ಹೊನ್ನಪ್ಪ ಮಾಣಿ,ರಝಾಕ್ ಮಾಣಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!
%d bloggers like this: