janadhvani

Kannada Online News Paper

ವಿಟ್ಲ ಮನೆ ಮೇಲೆ ಗುಡ್ಡ ಕುಸಿತ: ಧಾವಿಸಿದ SSF ಅಳಕ್ಕೆ ಶಾಖೆಯ ಯುವಕರ ತಂಡ

ವಿಟ್ಲ: ಗುಡ್ಡ ಕುಸಿದು ಮನೆ ಸಂಪೂರ್ಣವಾಗಿ ನೆಲಸಮಗೊಂಡ ಪರಿಣಾಮ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಮಂಗಳಪದವು ಸಮೀಪದ ಬನಾರಿ ಬಾಬುಕಟ್ಟೆಯಲ್ಲಿ ಸಂಭವಿಸಿದೆ‌.

ತರಕಾರಿ ವ್ಯಾಪಾರಿ ಅಬ್ದುಲ್ಲ ಅವರ ಮನೆಯ ಪಕ್ಕದ ಧರೆಯು ಜೋರಾದ ಮಳೆಗೆ ಕುಸಿದು ಮನೆ ಮೇಲೆ ಬಿದ್ದಿದೆ. ಕುಟುಂಬದ ಆರು ಮಂದಿ ಕುಸಿದು ಬಿದ್ದ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದರು. ತಕ್ಷಣ ಸ್ಥಳೀಯರು ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾರಿ ದೊಡ್ಡ ಪ್ರಮಾಣದ ಗುಡ್ಡೆ ಕುಸಿದುದ್ದರಿಂದ ಮನೆಯು ಸಂಪೂರ್ಣವಾಗಿ ನೆಲಸಮಗೊಂಡಿದ್ದು ಮನೆಯಲ್ಲಿನ ಸಾಮಾಗ್ರಿಗಳು , ಖಡತೆಗಳೆಲ್ಲವು ಮಣ್ಣುಪಾಲಾಗಿದ್ದು ಅವುಗಳನ್ನು ವಿಟ್ಲ ತಣ್ಣೀರುಪಂತ ಅಳಕ್ಕೆ ಶಾಖೆಯ ಕಾರ್ಯಕರ್ತರ ಸಹಾಯದಿಂದ ಅಗೆದು ತೆಗೆಯುವಲ್ಲಿ ಶಮೀರ್ , ಮುಸ್ತಫಾ , ಆಸಿಫ್ , ನಿಝಾಂ , ಇಸ್ಮಾಯಿಲ್ , ಸತ್ತಾರ್ , ಫಾರೂಖ್,ಅನ್ಸಾರ್,ಶೌಕತ್ ಆಲಿ, ಸಿದ್ದೀಕ್ ಮದನಿ ಕುದ್ರಡ್ಕ ಸಹಕಾರಿಯಾಗಿ ಕುಟುಂಬದ , ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು.