janadhvani

Kannada Online News Paper

ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ವಿಶ್ವದ ಅತಿ ಉನ್ನತ ಚಿಂತಕಿಯಾಗಿ ಆಯ್ಕೆ

ತಿರುವನಂತಪುರ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಕೇರಳವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಫೂರ್ತಿಯಾಗಿ ಮುಂದುವರೆದಿದೆ. ಬ್ರಿಟಿಷ್ ನಿಯತ ಕಾಲಿಕ ಪ್ರಾಸ್ಪೆಕ್ಟ್, ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ವಿಶ್ವದ ಅತಿ ಉನ್ನತ ಚಿಂತಕಿ ಎಂದು ಆಯ್ಕೆ ಮಾಡಿದೆ.

ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಸೇರಿದಂತೆ 50 ವ್ಯಕ್ತಿಗಳ ಪಟ್ಟಿಯಲ್ಲಿ ಶೈಲಜಾ ಅವರನ್ನು ಆಯ್ಕೆ ಮಾಡಲಾಗಿದೆ, ತತ್ವಜ್ಞಾನಿ ಕಾರ್ನೆಲ್ ವೆಸ್ಟ್, ಇತಿಹಾಸಕಾರ ಆಲಿವೆಟ್ ಒಟೆಲ್ ಇತರರು ಈ ಪಟ್ಟಿಯಲ್ಲಿದ್ದಾರೆ. ಪ್ರಾಸ್ಪೆಕ್ಟ್ ಮ್ಯಾಗಜೀನ್ ಪ್ರಕಾರ ‘ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ( ರೈಟ್ ವುಮೆನ್ ಇನ್ ರೈಟ್ ಪ್ಲೇಸ್) ಎಂದು
ಹೇಳಿದೆ.

ಜನವರಿಯಲ್ಲಿ ಕೋವಿಡ್ -19 ಇನ್ನೂ ಚೀನಾದ ಕಥೆಯಾಗಿದ್ದಾಗ, ಶೈಲಜಾ ಟೀಚರ್ ನಿಖರವಾಗಿ ಕೊರೋನಾ ಆಗಮನವನ್ನು ಗಮನಿಸಿ ಅದರಿಂದ ಉಂಟಾಗುವ ಪರಿಣಾಮಗಳ ಮುನ್ಸೂಚನೆ ನೀಡಿದ್ದರು ಎಂದು ಮ್ಯಾಗಜೀನ್ ತಿಳಿಸಿದೆ.