janadhvani

Kannada Online News Paper

ಸೌದಿ: ಸುಳ್ಯದ ಸಹೋದರನ ಶಸ್ತ್ರಚಿಕಿತ್ಸೆಗೆ KCF ನಿಂದ ಕ್ಷಿಪ್ರ ಕಾರ್ಯಾಚರಣೆ- 17 ಬಾಟಲ್ ರಕ್ತದಾನ

ರಿಯಾದ್: ಸೌದಿ ಅರೇಬಿಯಾದ ರಿಯಾದಿನ ಶಿಮೇಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ತಾಲೂಕಿನ ಸಹೋದರರೊಬ್ಬರಿಗೆ KCF ಕಾರ್ಯಕರ್ತರು ಕ್ಷಿಪ್ರವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ರೋಗಿಯೊಬ್ಬರಿಗೆ 20 ಬಾಟಲ್ ರಕ್ತ ಬೇಕೆಂಬ ಸಂದೇಶ ಲಭಿಸಿದ ತಕ್ಷಣ,ಕೆಸಿಎಫ್ ಸಂಘಟನೆಯ ಕಾರ್ಯಕರ್ತರು ಸ್ಪಂದಿಸಿ, 17 ಬಾಟಲ್ ರಕ್ತದಾನ ಮಾಡಿದರು.

ಇದೇ ಬುಧವಾರದಂದು ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಎಲ್ಲರೂ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲು ಮತ್ತು ಆರೋಗ್ಯ ಆಫಿಯತ್ ಗಾಗಿ ಪ್ರತ್ಯೇಕ ದುಆ ಮಾಡಲು ಕೆಸಿಎಫ್ ವಿನಂತಿಸಿದ್ದು, ಸಂದೇಶ ಸಿಕ್ಕಿದ ಕೂಡಲೇ ಕ್ಷಿಪ್ರವಾಗಿ ಸ್ಪಂದಿಸಿ ರಕ್ತದಾನ ಮಾಡಿದ ಎಲ್ಲಾ ಕೆಸಿಎಫ್ ಕಾರ್ಯಕರ್ತರನ್ನು ಕೆಸಿಎಫ್ ಅಭಿನಂದಿಸಿದೆ.

ಸಾಂತ್ವನ ಇಲಾಖೆ ಕೆಸಿಎಫ್ ರಿಯಾದ್