ಯುಎಇ: ಖ್ಯಾತ ಚಿಂತಕ ಹಾಗೂ ಸುನ್ನೀ ಸಂಘ ಸಂಸ್ಥೆಗಳ ನಾಯಕರಾಗಿ ಗುರುತಿಸಿಕೊಂಡಿದ್ದ ಪ್ರೊ। ಎಸ್ ಅಬ್ದುರ್ರಹ್ಮಾನ್ ಇಂಜಿನಿಯರ್ ರವರ ಅಕಾಲಿಕ ಮರಣಕ್ಕೆ ಕರ್ನಾಟಕ ಕಲ್ಚರಲ್ ಪೌಂಡೇಶನ್ ಯುಎಇ ತೀವ್ರ ಸಂತಾಸ ವ್ಯಕ್ತಪಡಿಸುತ್ತದೆ.
SSF ಮತ್ತು SYS ಸುನ್ನೀ ಸಾಂಘಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡು ಎಲ್ಲಾ ಉಲಮಾ ನಾಯಕರಿಗೂ ಎಸ್. ಅಬ್ದುರ್ರಹ್ಮಾನ್ ಇಂಜಿನಿಯರ್ ಚಿರಪರಿಚಿತರಾಗಿದ್ದರು. ಬಹುಭಾಷಾ ಪಾಂಡಿತ್ಯವನ್ನು ಹೊಂದಿದ್ದ ಮೃತರು ಬರಹ ಹಾಗೂ ಭಾಷಣಗಳ ಸಾಮುದಾಯಿಕ ಬದಲಾವಣೆಯನ್ನು ಬಯಸಿ ಯುವಸಮೂಹವನ್ನು ಸಮನ್ವಯ ಶಿಕ್ಷಣದ ಕಡೆಗೆ ಒಲವು ತೋರುವಂತೆ ಪ್ರೊತ್ಸಾಹಿಸುತ್ತಿದ್ದರು. ಇಸ್ಲಾಂ ಮತ್ತು ಸೈನ್ಸ್ ಆಂಗ್ಲ ಪತ್ರಿಕೆಯನ್ನು ಮುನ್ನಡೆಸುತ್ತಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರೊ: ಎಸ್ ಅಬ್ದುರ್ರಹ್ಮಾನ್ ರವರ ಅಕಾಲಿಕ ಮರಣ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಕೆಸಿಎಫ್ ಯುಎಇ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ದುಬೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
B.E, MTech & PhD ಪದವೀಧರಾಗಿದ್ದ ಪ್ರೊ: ಎಸ್. ಅಬ್ದುಲ್ ರಹ್ಮಾನ್ ಇಂಜಿನಿಯರ್ ರವರು ದಕ್ಷಿಣ ಕರ್ನಾಟಕದ ಹೆಸರಾಂದ ವಿಶ್ವವಿದ್ಯಾನಿಲಯಗಳಲ್ಲಿ ಪ್ರೊಫೇಸರ್ ಆಗಿಯೂ HOD (C&E) ಮತ್ತು ಇಂಜಿನಿಯರ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೃತರ ಮಗ್ಫಿರತ್ ಗಾಗಿ ದುಆ ಮಾಡಿ ಮಯ್ಯತ್ ನಮಾಝ್ ನಿರ್ವಹಿಸಬೇಕೆಂದು ಎಲ್ಲಾ ಸುನ್ನೀ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿ ಕುಟುಂಬಕ್ಕೆ ಸಮಾಧಾನ ಕರುಣಿಸಲೆಂದು ಅವರು ಪ್ರಾರ್ಥಿಸಿದರು.