ಪ್ರಮುಖ ಸುನ್ನೀ ನಾಯಕ ಧಾರ್ಮಿಕ -ಲೌಕಿಕ ವಾಗಿ ಅಪಾರ ಪಾಂಡಿತ್ಯ ಹೊಂದಿದ್ದ ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವದ ಪ್ರೊಫೆಸರ್ ಎಸ್ ಅಬ್ದುರ್ರಹ್ಮಾನ್ ಇಂಜಿನಿಯರ್ ರವರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಬರಹ, ಭಾಷಣ, ಪತ್ರಿಕೆ ಮತ್ತು ಸಂಘಟನೆ ಮೂಲಕ ದೀನಿಗಾಗಿ ಅಹರ್ನಿಶಿ ದುಡಿಯುತ್ತಿದ್ದ ಇಂಜಿನಿಯರ್ ರವರು ಪ್ರಚಾರ ಪ್ರಿಯರಾಗಿರದೆ ನಿಸ್ವಾರ್ಥ ಹಾಗೂ ನಿಷ್ಠಾವಂತ ಸೇವೆಗೆ ಉತ್ತಮ ಮಾದರಿಯಾಗಿದ್ದರು.
ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸುತ್ತಾ ಅವರ ಪಾರತ್ರಿಕ ವಿಜಯಕ್ಕಾಗಿ ಮದ್ರಸಗಳಲ್ಲಿ ಪ್ರತ್ಯೇಕ ಪ್ರಾರ್ಥನೆ ನಡೆಸಬೇಕೆಂದು ವಿನಂತಿಸುತ್ತಿದ್ದೇನೆ.
ಅಲ್ಲಾಹು ಅವರಿಗೆ ವಿಚಾರಣೆ ರಹಿತವಾಗಿ ಸ್ವರ್ಗೋದ್ಯಾನ ನೀಡಲಿ. ಆಮೀನ್.
ಆತೂರ್ ಸಅದ್ ಮುಸ್ಲಿಯಾರ್
ರಾಜ್ಯಾಧ್ಯಕ್ಷರು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ.