ಕುಂತೂರು, ಆಗಸ್ಟ್. 16: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ಹಾಗೂ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ (SSF) ಕುಂತೂರು ಯುನಿಟ್ ವತಿಯಿಂದ ಆಯೋಜಿಸಿದ ಭಾರತ ಸರಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ SYS-SSF ಕುಂತೂರು ಯುನಿಟ್ ಕಛೇರಿ ಆಶಿರ್ವಾದ್ ಬಿಲ್ಡಿಂಗ್ ಕುಂತೂರು ಕಜೆ ಯಲ್ಲಿ ನಡೆಯಿತು.
ಕಾರ್ಯಕ್ರಮವು SYS ಬ್ರಾಂಚ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ರವರ ದುಆದೊಂದಿಗೆ ಆರಂಭಗೊಂಡು, SYS ಬ್ರಾಂಚ್ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು ರವರು ಉಧ್ಘಾಟಸಿದರು, ತದನಂತರ ಅಭಿಯಾನದಲ್ಲಿ ಸರ್ವ ಧರ್ಮ ಜಾತಿ,ಪಕ್ಷ ಪಂಗಡಗಳ ಭೇದಮನ್ಯೆ ಊರಿನ ಸುಮಾರು 200 ರಷ್ಟು ಜನರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಪ್ರಸ್ತುತ ಕಾರ್ಯಕ್ರಮ ದಲ್ಲಿ ಹಮೀದ್ ಯು ಕೆ,ಹಂಝಾ ಸಅದಿ ಕುಂತೂರು,ಉಂಞಿ ಉಸ್ತಾದ್,ಅಬ್ದುಲ್ ಲತೀಫ್ ಮದನಿ,ಹನೀಫ್ ಝೈನಿ, ಹನೀಫ್ ಸಅದಿ, ಅಯ್ಯೂಬ್ ಯು ಕೆ,ಹಮೀದ್ ಕೆ ಆರ್,ಮುಹಮ್ಮದ್ ಅಶ್ರಫ್ ನೆಕ್ಕರೆ, ಅಬ್ದುಲ್ಲಾ ಕುಂಞಿ ಆಲಂಕಾರು,ಬಶೀರ್ ತಾಜ್,ಅಬ್ಬಾಸ್ ಕೆ ಎಸ್ ಆರ್ ಟಿ ಸಿ,ಹನೀಫ್ ಮುಡುಪಿನಡ್ಕ,ಉನೈಸ್ ಅಹ್ಮದ್ ಕುಂತೂರು, ಅಬ್ದುಲ್ ಲತೀಫ್ ಸುರುಳಿ, ಶಾಫಿ ಪೂಂಜಾ, ಫಾರೂಖ್ ಕೋಚಕಟ್ಟೆ, ಮುಸ್ತಫಾ ಗಾಂಜಾಲ್, ಹನೀಫ್ ಮುಡುಪಿನಡ್ಕ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಂಸು ಗಾಂಜಾಲ್ ಸ್ವಾಗತಿಸಿ ಧನ್ಯವಾದವಿತ್ತರು.