janadhvani

Kannada Online News Paper

ಸುಳ್ಯ:ಸೋಷಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ SDAU ಇದರ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಗಾಂಧಿನಗರ ಪೆಟ್ರೋಲ್ ಬಂಕ್ ಮುಂಬಾಗದಲ್ಲಿ ನಡಯಿತು.

ಎಸ್.ಡಿ.ಎ.ಯು ತಾಲೂಕು ಅದ್ಯಕ್ಷರಾದ ಶಾಫಿ ಎಂ.ಆರ್. ಧ್ವಜಾರೋಹಣ ನೆರವೇರಿಸಿದರು.
ಎಸ್.ಡಿ.ಟಿ.ಯು ತಾಲೂಕು ಅದ್ಯಕ್ಷರಾದ ಫೈಝಲ್ ಬೆಳ್ಳಾರೆ ಮತ್ತು ಪಿಎಫ್ಐ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಥಾವುಲ್ಲಾ ಕಲ್ಲುಮುಟ್ಲು ಸಬಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ,
ಸ್ನೇಹ ಸಂಗಮ ಅಟೋ ಚಾಲಕ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಪರಿವಾರಕಾನ, ಎಸ್.ಡಿ.ಟಿ.ಯು ಇದರ ಜಿಲ್ಲಾ ಸಂಚಾಲಕ ಹಮೀದ್ ಬಿಳಿಯಾರು, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಕಲ್ಲುಮುಟ್ಲು, ತಾಲೂಕು ಸಮಿತಿ ಸದಸ್ಯ ಮೊಯ್ದು ಕಲ್ಲುಮುಟ್ಲು ಭಾಗವಹಿಸಿದ್ದರು.ಕಬೀರ್ ಕಲ್ಲುಮುಟ್ಲು ಸ್ವಾಗತಿಸಿದರು.