janadhvani

Kannada Online News Paper

ಡಿಜೆ ಹಳ್ಳಿಯ ಗಲಭೆ ಪ್ರವಾದಿಪ್ರೇಮವಲ್ಲ!

✍️ಪಿಎಂ ಇಕ್ಬಾಲ್ ಕೈರಂಗಳ

ಪ್ರವಾದಿ ಮುಹಮ್ಮದ್ ಸ.ಅ.ರವರನ್ನು ನವೀನ್ ಎಂಬ ವಿಕೃತಾತ್ಮ ನಿಂದನೆ ಮಾಡಿದ್ದು ತಪ್ಪು. ಇಂತಹ ತಪ್ಪುಗಳು ಆಗದಂತೆ ತಡೆಯುವ ಶಕ್ತಿ ಸಭ್ಯರಿಗಿಲ್ಲ. ಅವರ ಪಾಡಿಗೆ ಅವರು ವಿಕೃತಿ ಮೆರೆಯುತ್ತಾ ಇರುತ್ತಾರೆ. ಇನ್ನು ಮುಂದಕ್ಕೂ ಇರುತ್ತೆ.

ತಾಯಿಯನ್ನೇ ಕಾಮಿಸೋರು, ಮಗಳನ್ನೇ ಭೋಗಿಸೋರು. ಇಂತಹವರು ಇರುವ ಈ ಸಮಾಜದಲ್ಲಿ ಮಹಾನರನ್ಮು ನಿಂದಿಸೋರು ಮಾತ್ರ ಇರಬಾರದು ಎಂದರೆ ಅಪಕ್ವತೆ ಆಗುತ್ತದಷ್ಟೇ.

ಕೇಸು ದಾಖಲಿಸೋದೇ ಅವರ ಕರ್ತವ್ಯವಾಗಿತ್ತು. ಅದರಾಚೆ ಅವರನ್ನು ಹೋಗಲು ಬಿಟ್ಟದ್ದು ಪ್ರವಾದಿಯವರ ಬೋಧನೆಯಲ್ಲ. ಅಪಕ್ವತೆಯಿಂದ ಬರುವ ಉದ್ವೇಗ ಅದು. ಏನಿಲ್ಲವೆಂದರೂ ನಾಳಿನ ಲೋಕದಲ್ಲಿ ಸರಿಯಾದ ವಿಚಾರಣೆಯಲ್ಲಿ ನ್ಯಾಯ ಜಾರಿಯಾಗಿಯೇ ಆಗುತ್ತದೆ ಎಂಬ ವಿಶ್ವಾಸ ಇಲ್ಲದಿದ್ದರೆ ಅವರು ಮುಸ್ಲಿಮರೇ ಆಗುವುದಿಲ್ಲ.

ಆದರೆ ಪ್ರವಾದಿಯವರನ್ನು ನಿಂದನೆ ಮಾಡಿದಕ್ಕಾಗಿ ಇಡೀ ಮುಸ್ಲಿಂ ಸಮಾಜವನ್ನು ನಿಂದನೆ ಮಾಡುವ, ಮೂರು ಜೀವವವನ್ನು ಬಲಿಕೊಡುವ ಹಕ್ಕು ಡಿಜೆ ಹಳ್ಳಿಯಲ್ಲಿ ಸೇರಿ ಗಲಭೆಮಾಡಿದ ಕೆಲವು ಮುಸ್ಲಿಮರಿಗೆ ಕೊಟ್ಟವರು ಯಾರು?

ಅವರ ವರ್ತನೆ ಲೋಕದ ದೊಡ್ಡ ನಾಗರಿಕ, ಸಭ್ಯರೆನಿಸಿಕೊಳ್ಳಲು‌ ಅರ್ಹತೆಯಿರುವವರೆಂದು ಭಾವಿಸಿದ ಮುಸ್ಲಿಮರಿಗೆ ಕಳಂಕ. ಅವರು ಅನಾಗರಿಕರಾಗಿ ವರ್ತಿಸಿ ಮುಸ್ಲಿಮರನ್ನೇ ನಿಂದನೆ ಮಾಡಿದ್ದಾರೆ ಎಂಬುದೇ ಸರಿಯಾದ ವ್ಯಾಖ್ಯಾನ.

ಯಾರೋ ಅಲ್ಪಜೀವಿಯಿಂದಾದ ಪ್ರವಾದಿನಿಂದನೆಗೆ ಪ್ರತಿಕ್ರಿಯೆಯಾಗಿ ಪ್ರವಾದಿಯವರ ಅನುಯಾಯಿಗಳ ಘಣತೆ , ಗಾಂಭೀರ್ಯಕ್ಕೆ ಘಾಸಿಮಾಡುವುದು ಅದೆಷ್ಟು ಅಪಕ್ವತೆ ಎಂಬುದು ಅವರಿಗೆ ಗೊತ್ತಿರಲಿಕ್ಕಿಲ್ಲ. ಧರ್ಮದ, ಪ್ರವಾದಿಪ್ರೇಮದ ಸ್ಪಿರಿಟಲ್ಲಿ ಪ್ರವಾದಿಯವರು ಬೋಧಿಸಿದ ಜೀವನಶೈಲಿಯನ್ನು ಮರೆತ ಆ ಅನಾಗರಿಕರಿಗೆ ನನ್ನದೊಂದು ಧಿಕ್ಕಾರ.

ತನ್ನಿಂದಾಗಿ ಇಷ್ಟೆಲ್ಲಾ ಸಾಧನೆ ಸಾಧ್ಯವಾಯಿತೆಂದು ಆ ಪ್ರವಾದಿ ನಿಂದನೆ ಮಾಡಿದ ಆತ್ಮವು ಸಂತುಷ್ಟಗೊಂಡಿರಬಹುದು. ಆ ಸಂತೃಪ್ತಿ, ತಮ್ಮ ಹೆಸರು ಹಾಳುಮಾಡಿಕೊಂಡದ್ದು ಮತ್ತು ಮೂರು ಜೀವ ಬಲಿ ಇವನ್ನು ಅಲ್ಲಿನ ಕೆಲವು ಮುಸ್ಲಿಮರು ಸಾಧಿಸಿಯೇಬಿಟ್ಟಿದ್ದಾರೆ. ಇದು ಪ್ರವಾದಿನಿಂದನೆಗೆ ಸಮವಾದ ಕಾರ್ಯವಲ್ಲದೆ ಬೇರೇನು?

error: Content is protected !! Not allowed copy content from janadhvani.com