janadhvani

Kannada Online News Paper

SSLC: ವಿಶಿಷ್ಟ ಶ್ರೇಣಿ ಅಲಂಕರಿಸಿದ ಫಾತಿಮತ್ ನಿಶಾ ಹಾಗೂ ಫಾತಿಮತ್ ಶೈಮಾ

ಉಪ್ಪಿನಂಗಡಿ : 2019 – 20 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮತ್ ನಿಶಾ 578 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಇವರು ಉಪ್ಪಿನಂಗಡಿ ಪಿ.ಎಸ್ ಅಬೂಬಕ್ಕರ್ ಹಾಗೂ ಅಸ್ಮಾ ದಂಪತಿಗಳ ಪುತ್ರಿ.

ಕರಾಯ ಸರಕಾರಿ ಪ್ರೌಡ ಶಾಲಾ ವಿದ್ಯಾರ್ಥಿನಿ ಫಾತಿಮತ್ ಶೈಮಾ 545 ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕರಾಯ ಯಅಖೂಬ್ ದಾರಿಮಿ ಹಾಗೂ ಝಹ್ರ ದಂಪತಿಗಳ ಪುತ್ರಿ.