ಮಧ್ಯ ಪ್ರದೇಶ: ಇಲ್ಲಿನ ಇಂದೋರ್ ನಗರದ ನಿವಾಸಿ ಪ್ರಖ್ಯಾತ ಉರ್ದು ಶಾಯರ್ ಡಾ ರಾಹತ್ ಅಲಿ ಇಂದೋರಿ ಇಂದು ಮಧ್ಯಾಹ್ನ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೊರೋನಾ ಪಾಸಿಟಿವ್ ಬಂದುದಾಗಿ ಮಾಹಿತಿ ನೀಡಿದ್ದ ಇಂದೋರಿ ಯವರು ಚಿಕಿತ್ಸೆಗೊಸ್ಕರ ನಗರದ ಅರಬಿಂದೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಈ ಲೋಕದಿಂದ ವಿದಾಯ ಹೇಳಿರುವುದಾಗಿ ಡಾ ರವಿ ದೋಷಿ ಮಾಹಿತಿ ನೀಡಿದ್ದು ಅವರಿಗೆ 2 ಬಾರಿ ಹೃದಯಾಘಾತ ವಾಗಿದ್ದಾಗಿಯೂ ಮತ್ತು ನ್ಯುಮೋನಿಯಾದಿಂದಲೂ ಬಳಲುತ್ತಿದ್ದುದಾಗಿ ವಿವರ ನೀಡಿದ್ದಾರೆ.
ಹಿಂದಿ ಭಾಷೆಯ ಹಲವಾರು ಪ್ರದರ್ಶನಗಳಲ್ಲಿ ಇಂದೋರಿಯವರು ವಾಚಿಸಿದ ಶಾಯರಿ “ಕಿಸೀಕ ಬಾಪ್ ಕ ಹಿಂದುಸ್ತಾನ್ ಥೋಡಿ ಹೇ” ಪ್ರಪಂಚದಾದ್ಯಂತ ಕೋಟ್ಯಾಂತರ ಜನರ ಮೆಚ್ಚುಗೆ ಗಳಿಸಿತ್ತು.