janadhvani

Kannada Online News Paper

ಎಸ್ಸೆಸ್ಸೆಲ್ಸಿ: ಅಂಗರಗುಡ್ಡೆ ಮುಹಮ್ಮದ್ ಹಾಶಿಂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಮುಲ್ಕಿ: ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2020 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮುಹಮ್ಮದ್ ಹಾಶಿಂ 565 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮುಲ್ಕಿ ಮೆಡಲಿನ್ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದು, ಶಾಲೆಗೆ ಕೀರ್ತಿ ತಂದಿರುವ ಹಾಶಿಂ, ಅಂಗರಗುಡ್ಡೆ ಅಬ್ದುಲ್ ಖಾದರ್ ಅವರ ಪುತ್ರ.

ಇವರ ಸಾಧನೆಗೆ ಕುಟುಂಬಸ್ಥರು, ಹಿರಿಯರು, ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.