ಕೋಝಿಕ್ಕೋಡ್: ದುಬೈ–ಕೋಯಿಕ್ಕೋಡ್ ನಡುವಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (ಐಎಕ್ಸ್–1344) ಕೇರಳದ ಕೋಝಿಕ್ಕೋಡ್‌ನ ಕರಿಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವ ವೇಳೆ ಅವಘಡಕ್ಕೀಡಾಗಿದೆ.
ರಾತ್ರಿ 7.45ರಲ್ಲಿ ಅಪಘಾತ ಸಂಭವಿಸಿದೆ ಎಂದು ಕೊಂಡೋಟ್ಟಿ ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲಿ 174 ಪ್ರಯಾಣಿಕರು, 6 ಮಂದಿ ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ. ಈ ಪೈಕಿ ಇಬ್ಬರು ಪ್ರಯಾಣಿಕರು, ಪೈಲಟ್ ಮೃತಪಟ್ಟಿರುವುದಾಗಿ ಆರಂಭಕಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ವಿಮಾನದ ಸಂಖ್ಯೆ IX-1344 ಆಗಿದ್ದು, ಸಾರ್ವಜನಿಕವಾಗಿ ಲಭ್ಯವಾದ ಘಟನಾವಳಿಯ ಮೊದಲ ದೃಶ್ಯಗಳಲ್ಲಿ ವಿಮಾನವು ಎರಡು ತುಂಡುಗಳಾಗಿ ಒಡೆದಿದ್ದು, ಅದರ ಅವಶೇಷಗಳು ರನ್ವೇ ಮತ್ತು ಅದರಾಚೆಗೆ ಹರಡಿಕೊಂಡಿವೆ.
ಸದ್ಯದ ಮಾಹಿತಿ ಪ್ರಕಾರ ಅನೇಕ ಪ್ರಯಾಣಿಕರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ, ಪೊಲೀಸರು ಹಾಗೂ ಆಂಬುಲೆನ್ಸ್ಗಳು ಬೀಡುಬಿಟ್ಟಿವೆ. ಇನ್ನು ವಿಮಾನಕ್ಕೆ ಬೆಂಕಿ ತಗುಲದ ಕಾರಣ ಗಂಭೀರ ಅಪಘಾತದಿಂದ ಪ್ರಯಾಣಿಕರು ಪಾರಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ವಿಮಾನ ದುರಂತಕ್ಕೆ ಸಮಾನ
ಮಂಗಳೂರು ಮತ್ತು ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು “ಟೇಬಲ್ ಟಾಪ್” ನಿಲ್ದಾಣಗಳಾಗಿದ್ದು, ಭಾರೀ ಜಾಗರೂಕತೆಯಿಂದ ಲ್ಯಾಂಡಿಂಗ್ ಮಾಡಲಾಗುತ್ತದೆ. ರನ್ವೇಯಿಂದ ಜಾರಿದ್ದಲ್ಲಿ ಆಳವೇರಿದ ಗುಂಡಿಗೆ ವಿಮಾನ ಪತನಗೊಳ್ಳುತ್ತದೆ.
ಕಲ್ಲಿಕೋಟೆಯ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲೂ, ಮಂಗಳೂರಿನಲ್ಲಿ 2010 ರಲ್ಲಿ ನಡೆದ ಸಮಾನ ದುರಂತ ಸಂಭವಿಸಿದೆ ಆದರೂ, ಬೆಂಕಿ ತಗುಲದ ಕಾರಣ ಭಾರೀ ಅನಾಹುತದಿಂದ ಪ್ರಯಾಣಿಕರು ಪಾರಾಗಿದ್ದಾರೆ.
2010 ಮೇ 22ರ ಮುಂಜಾನೆ ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ವಿಮಾನ ಇನ್ನೇನು ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್ವೆವೇಯಿಂದ ಜಾರಿ ನಿಯಂತ್ರಣ ತಪ್ಪಿ ಸಂಭವಿಸಿದ ಮಹಾ ದುರಂತದಲ್ಲಿ 166 ಪ್ರಯಾಣಿಕರ ಪೈಕಿ 158 ಮಂದಿ ಮೃತಪಟ್ಟಿದ್ದರು. ಮಿಮಾನಕ್ಕೆ ಬೆಂಕಿ ಹೊತ್ತಿಕೊಂಡದ್ದರಿಂದ ಭಾರೀ ಮರಣ ಸಂಭವಿಸಿತ್ತು.






