ರಿಯಾದ್: ಸೌದಿ ಅರೇಬಿಯಾದಲ್ಲಿ ಉಮ್ರಾ ತೀರ್ಥಯಾತ್ರೆ ಪುನರಾರಂಭಿಸುವುದಾಗಿ ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಿಸಿದೆ.
ಕೋವಿಡ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಐದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಉಮ್ರಾ ತೀರ್ಥಯಾತ್ರೆ ಪುನರಾರಂಭಕ್ಕೆ ಸಜ್ಜಾಗಿದೆ. ಕೋವಿಡ್ ವ್ಯಾಪಿಸಿರುವ ಮಧ್ಯೆ ಹಜ್ ಯಶಸ್ವಿಯಾಗಿ ಪೂರ್ಣಗೊಂಡ ಸಂದರ್ಭದಲ್ಲಿ ಉಮ್ರಾ ತೀರ್ಥಯಾತ್ರೆ ಪ್ರಾರಂಭಿಸಲು ಸೌದಿ ತಯಾರಿ ನಡೆಸಿದೆ.
ಕೋವಿಡ್ ದೃಢೀಕರಿಸಿದ ನಂತರ ಮಾರ್ಚ್‌ನಿಂದ ಉಮ್ರಾ ಯಾತ್ರೆಗೆ ನಿರ್ಬಂಧ ವಿಧಿಸಲಾಗಿತ್ತು. ತರುವಾಯ, ದೇಶದಲ್ಲಿ ಅಸ್ತಿತ್ವದಲ್ಲಿದ್ದ ಯಾತ್ರಿಕರನ್ನು ಕ್ರಮೇಣ ವಾಪಸ್ ಕಳುಹಿಸಲಾಯಿತು.
ಅಂದಿನಿಂದ, ಮಕ್ಕಾದ ಹರಮ್ ಮಸೀದಿಯಲ್ಲಿ ನಿಯಂತ್ರಣಾತೀತ ಪ್ರಾರ್ಥನೆ ನಡೆಸಲಾಗುತ್ತಿತ್ತು, ಬಳಿಕ ಇದೀಗ ಹಜ್ ಯಾತ್ರಾರ್ಥಿಗಳಿಗೆ ಹರಂ ಮಸೀದಿಗೆ ಪ್ರವೇಶ ನೀಡಲಾಯಿತು. ಈ ವರ್ಷದ ಹಜ್ ವಿಶೇಷ ನಿಯಂತ್ರಣದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಜ್ ಮತ್ತು ಉಮ್ರಾ ಸಚಿವಾಲಯವು ಮುಂದಿನ ಉಮ್ರಾ ಋತುವನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ.
ಆರೋಗ್ಯ ಸಚಿವಾಲಯದ ಕೋವಿಡ್ ಪ್ರೋಟೋಕಾಲ್ ಅನುಸಾರವಾಗಿ ಉಮ್ರಾ ತೀರ್ಥಯಾತ್ರೆ ನಡೆಸಲಾಗುವುದು. ಈ ವರ್ಷದ ಅಸಾಧಾರಣ ಹಜ್‌ನಿಂದ ಕಲಿತ ಪಾಠಗಳಿಗೆ ಅನುಗುಣವಾಗಿ ಮುಂದಿನ ಉಮ್ರಾ ಋತುವಿನ ಸಿದ್ಧತೆಗಳನ್ನು ಪ್ರಾರಂಭಿಸುವ ಯೋಜನೆಯಿದೆ ಎಂದು ಹಜ್ ವ್ಯವಹಾರಗಳ ಉಪ ಕಾರ್ಯದರ್ಶಿ ಡಾ.ಹುಸೈನ್ ಅಲ್-ಷರೀಫ್ ಹೇಳಿದರು.