ಬರಹ : ಮುಹಮ್ಮದ್ ಉಳ್ಳಾಲ್.
ಮೊಬೈಲ್ : 7022822983
ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ.. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.. ರಕ್ತದಾನ ಮಾಡುವುದರಿಂದ ಮಾತ್ರವೇ ಒಂದು ಜೀವವನ್ನು ಉಳಿಸಲು ಸಾಧ್ಯ.. ! ಎಂಬ ಘೋಷವಾಕ್ಯದೊಂದಿಗೆ ಉದಯವಾದ ಸಂಘಟನೆಯೇ ಮಂಗಳೂರಿನ
” ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್.
ರೋಗಿಗಳಿಗೆ ರಕ್ತ ಪೂರೈಸುವ ಸದ್ದುದ್ದೇಶವಿಟ್ಟು
ಕೊಂಡು ಮಂಗಳೂರಿನ ಸಮಾಜ ಸೇವಕ, ಉತ್ಸಾಯಿ ತರುಣ ರವೂಫ್ ಬಂದರ್ ಒಂದು
ತಂಡವನ್ನು ಕಟ್ಟಿ ಕೊಂಡು ಈ ಸಂಸ್ಥೆಯನ್ನು
ಅಸ್ತಿತ್ವಕ್ಕೆ ತಂದರು. ಮರ್ ಹೂಂ ಮಿತ್ತಬೈಲ್
ಜಬ್ಬಾರ್ ಉಸ್ತಾದ್ ರವರು ಚಾಲನೆ ನೀಡಿದ
ಈ ಸಂಸ್ಥೆಯು ಇಂದು ಮೂರನೇ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿ ಕೊಳ್ಳುತ್ತಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಸಂಸ್ಥೆಯ ಯಶಸ್ವಿ ಸಾಧನೆಯನ್ನು ಸಮಾಜದ ಜನರ ಮುಂದೆ ಪರಿಚಯಿಸುವುದು ಮತ್ತು ರಕ್ತದಾನದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ ಜನರಿಗೆ ಜಾಗೃತಿ ಮೂಡಿಸುವುದು ಈ ಕಿರು ನೋಟದ ಉದ್ದೇಶ.
ರಕ್ತದಾನ ಇದು ಅತ್ಯಂತ ಪುಣ್ಯದಾಯಕವಾದದ್ದು. ದಾನಗಳ ಸಾಲಿನಲ್ಲಿ ಶ್ರೇಷ್ಠವಾದ ದಾನ ಅಂದರೆ ರಕ್ತದಾನ. ನಾವು ಕೊಡುವ ಒಂದು ಬಾಟಲ್ ರಕ್ತವು ಒಂದು ಜೀವವನ್ನು ಉಳಿಸಲು ಸಾಧ್ಯ. ರಕ್ತದಾನ ಮಾಡುವುದರಿಂದ ಆರೋಗ್ಯ ಕೆಡುತ್ತದೆ ಎಂಬ
ತಪ್ಪು ಕಲ್ಪನೆ ಜನರಲ್ಲಿದೆ. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ
ಅಡ್ಡ ಪರಿಣಾಮ ( ಸೈಡ್ ಎಫೆಕ್ಟ್ ) ಇಲ್ಲ. ಇದರಿಂದ ಆರೋಗ್ಯ ವೃದ್ಧಿಸುತ್ತದೆ ಹೊರತು ಆರೋಗ್ಯಕ್ಕೆ ಯಾವುದೇ ಕೇಡು ಸಂಭವಿಸುವುದಿಲ್ಲ. ರಕ್ತ ನೀಡದೇ ಇದ್ದಲ್ಲಿ ಆರೋಗ್ಯದಲ್ಲಿ ಏರು ಪೇರಾಗುವುದು ಮಾತ್ರವಲ್ಲ ರಕ್ತ ದೊತ್ತಡ, ಹೃದಯಾಘಾತ ಮುಂತಾದ ಹಲವು ಸಮಸ್ಯೆಗಳನ್ನು ಎದುರಿಸುವ ಅಪಾಯಕ್ಕೆ ಆಹ್ವಾನ ನೀಡಿದಂತೆ !
ರಕ್ತದಾನ ಮಾಡುವುದರಿಂದ ಮತ್ತೆ ದೇಹದಲ್ಲಿ ರಕ್ತ ಉತ್ಪತ್ತಿಯಾಗುತ್ತದೆ ಎಂಬ ಅರಿವು ಪ್ರತೀಯೊಬ್ಬರಲ್ಲೋ ಇರಬೇಕಾಗಿದೆ.ರಕ್ತದಾನದಿಂದ ಒಂದು ಜೀವ ವನ್ನು ಉಳಿಸಬಹುದು ಎಂಬ ಪ್ರಜ್ಞೆ ನಮ್ಮಲ್ಲಿದ್ದರೆ ರಕ್ತದ ಕೊರತೆ ಉಂಟಾಗದು.
ಈ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹಲವು
ಸಂಘ ಸಂಸ್ಥೆಗಳ ಅಧೀನದಲ್ಲಿ ನಡೆಯುತ್ತಿದ್ದರೂ ಅಗತ್ಯ ಸಂದರ್ಭಗಳಲ್ಲಿ ಸಕಾಲದಲ್ಲಿ ರೋಗಿಗಳಿಗೆ ರಕ್ತ ಪೂರೈಕೆ ಆಗುತ್ತಿಲ್ಲ ಎಂಬ ಕೊರಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದದನ್ನು ಮನಗಂಡ ರವೂಫ್ ಬಂದರ್ ಮತ್ತು ಸಂಗಡಿಗರು ರೋಗಿಗಳ ಪಾಲಿಗೆ ಆಪತ್ಭಾಂದವರಾಗಿ ರಾತ್ರಿ ಹಗಲೆನ್ನದೆ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ
ರಕ್ತ ಪೂರೈಸಿದ ಕೀರ್ತಿಗೆ ಪಾತ್ರರಾಗಿದ್ದು ನಾಡಿಗೆ
ಹೆಮ್ಮೆ ತಂದಿದೆ.
ಕಳೆದ ಎರಡು ವರ್ಷಗಳಲ್ಲಿ ನಾಡಿನ ಮೂಲೆ ಮೂಲೆಗಳಲ್ಲೂ ರಕ್ತದಾನ ಶಿಬಿರಗಳನ್ನು ನಡೆಸಿ ಜನ ಮೆಚ್ಚುಗೆ ಪಡೆದ ” ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ” ನ ನಿಸ್ವಾರ್ಥ ಸೇವೆಗೆ ರೆಡ್ ಕ್ರಾಸ್ ಸಂಸ್ಥೆ ನೀಡಿದ ಸಹಕಾರವೇ ಸಾಕ್ಷಿ.
ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ರವೂಫ್ ಬಂದರ್ ಮತ್ತು ತಂಡದ ಸಾಧನೆಗೆ ದೇಶ ವಿದೇಶದಲ್ಲೂ ಪ್ರಶಂಸೆಗಳು ಹರಿದು ಬರುತ್ತಿದೆ. ರೋಗಿಗಳ ಪಾಲಿನ ಆಶಾಕಿರಣವಾದ ” ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ” ಕಳೆದ ಎರಡು ವರ್ಷಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ 3000 ಸಾವಿರ ಯೂನಿಟ್ ಗೂ ಮಿಕ್ಕಿ ರಕ್ತವನ್ನು ಸಂಗ್ರಹಿಸಿ ಕ್ಲಪ್ತ ಸಮಯದಲ್ಲಿ ರೋಗಿಗಳಿಗೆ ಪೂರೈಕೆ ಮಾಡಿ ಜನ ಮೆಚ್ಚುಗೆ ಗಳಿಸಿದೆ.
ರವೂಫ್ ಬಂದರ್ ಅವರ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಮತ್ತು ಹಲವು ಸಂಘ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿದೆ. ರಕ್ತದಾನ ಶಿಬಿರ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕವೂ
ಈ ಸಂಸ್ಥೆ ತನ್ನ ಹಿರಿಮೆಯನ್ನು ಹೆಚ್ಚಿಸಿದೆ.
ಲಾಕ್ ಡೌನ್ ಸಂದರ್ಭದಲ್ಲೂ ರೋಗಿಗಳಿಗೆ
ಸಕಾಲದಲ್ಲಿ ರಕ್ತ ಪೂರೈಕೆ ಮಾಡಿ ಹಲವು ಜೀವ ಗಳನ್ನು ಉಳಿಸಿದ ಕೀರ್ತಿ ರವೂಫ್ ಬಂದರ್ ಮತ್ತು ತಂಡಕ್ಕೆ ಸಿಕ್ಕಿರುವುದು ಸಂಸ್ಥೆಯ ಮತ್ತೊಂದು ಹೆಗ್ಗಳಿಕೆ. ಬಡ ರೋಗಿಗಳಿಗೆ ಔಷದಿ ಖರೀದಿಸಲು ಹಣಕಾಸಿನ ನೆರವು, ಆಹಾರ ಕಿಟ್ ವ್ಯವಸ್ಥೆ ಮುಂತಾದ ಸಮಾಜಮುಖಿ ಕೆಲಸದ ಮೂಲಕವೂ ಈ ಸಂಸ್ಥೆ ಮಾದರಿಯಾಗಿದೆ. ಯಾವ ಸಂದರ್ಭದಲ್ಲಾದರೂ ರಕ್ತದ ಕೊರತೆ ಎದುರಾಗ ಬಾರದು. ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ರಕ್ತ ಸಿಗಬೇಕು.. ಜೀವವನ್ನು ಉಳಿಸಬೇಕು ಎಂಬುದು ” ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ” ನ ರೂವಾರಿ ರವೂಫ್ ಬಂದರ್
ಅವರ ಮನದಾಳದ ಮಾತುಗಳೇ ಸಂಸ್ಥೆಯ
ಯಶಸ್ವಿ ಸಾಧನೆಯ ಹಿಂದಿರುವ ಅವಿರತ ಶ್ರಮದ ಫಲವೇ ಇಂದಿನ ಸಂಭ್ರಮದ ವಿಜಯ.
ಬದ್ರುದ್ದೀನ್ ಕಲಾಯಿ, ನೌಫಲ್ ಕುದ್ರೋಳಿ, ಖಾದರ್ ಕಂದಕ್, ರುಬಿಯಾ ಎಲ್ ಎಲ್ ಬಿ ಮೊದಲಾದ ಅನುಭವಿಗಳ ತಂಡವೇ ಹೆಜ್ಜೆ
ಹೆಜ್ಜೆಗೂ ಹೆಗಲು ಕೊಟ್ಟವರು. ಇವರೆಲ್ಲರೂ ಸೇರಿ ಈ ಸಂಸ್ಥೆಯ ಯಶಸ್ವಿಗೆ ಕಾರಣ ಕರ್ತರು ಎಂದು ರವೂಫ್ ಬಂದರ್ ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರಿಗೆ ಅವರ ಸೇವೆಯನ್ನು ನೆನಪಿಸಿದರು.