ಮಾಜಿ ಮೇಯರ್ ಕೆ.ಅಶ್ರಫ್ ನೇತೃತ್ವದ ಮುಸ್ಲಿಮ್ ಒಕ್ಕೂಟ ಮತ್ತು ಮಾಜಿ ಶಾಸಕ ಮೊಯಿದಿನ್ ಬಾವಾ ಜಂಟಿ ನಿಯೋಗದಿಂದ ಬಜ್ಪೆ ವಿಮಾನ ನಿಲ್ದಾಣದ ಸಮೀಪದ, ಉದ್ದೇಶಿತ ಹಜ್ ಭವನ ಜಮೀನು ಹೊರಾಂಗಣ ವೀಕ್ಷಣೆ ನಡೆಸಲಾಯಿತು.
ಮಂಗಳೂರು, ಜು.27: ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರು,ಮಾಜಿ ಮೇಯರ್ ಕೆ.ಅಶ್ರಫ್ ಮತ್ತು ಮಾಜಿ ಶಾಸಕರಾದ ಮೊಯಿದಿನ್ ಬಾವಾ ನೇತೃತ್ವದ ಜಂಟಿ ನಿಯೋಗವು ಈಗಾಗಲೇ ಸರ್ಕಾರದಿಂದ ಹಜ್ ಭವನ ನಿರ್ಮಾಣಕ್ಕೆ ಅಲ್ಪ ಸಂಖ್ಯಾತ ಇಲಾಖೆಗೆ ಮಂಜೂರಾದ ಸ್ಥಳವನ್ನು ಬಾಹ್ಯವಾಗಿ ವೀಕ್ಷಿಸಿತು.
ಇದು, ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಬದಿಯಲ್ಲಿರುವ ಮಳವೂರು ಗ್ರಾಮದಲ್ಲಿರುವ ಉದ್ದೇಶಿತ ಹಜ್ ಭವನ ನಿರ್ಮಾಣದ ಜಮೀನಾಗಿದ್ದು ಪ್ರಸ್ತುತ, ಅಸ್ತಿತ್ವದಲ್ಲಿರುವ ಕಾನೂನಾತ್ಮಕ ಅಡೆ ತಡೆಗಳನ್ನು ನಿವಾರಿಸುವ ಬಗ್ಗೆ ಸಮಾಲೋಚನೆ ನಡೆಸಿದರು.
ಹೆದ್ದಾರಿ ಪಕ್ಕದ ಈ ಜಮೀನು, ವಿಮಾನ ನಿಲ್ದಾಣಕ್ಕೆ ಸಮೀಪ ಮತ್ತು ವಿಶಾಲವಾದ ವಾಹನ ನಿಲುಗಡೆಗೆ ಸೂಕ್ತವಾದ ಸ್ಥಳವಾಗಿದೆ. ಹಜ್ ಹೊರತಾದ ವರ್ಷದ ಇತರ ಅವಧಿಯಲ್ಲಿ ಹಜ್ ಭವನವನ್ನು ಸಾಮುದಾಯಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡಬಹುದಾಗಿದೆ.
ನಿಯೋಗದಲ್ಲಿ ಮೊಹಮ್ಮದ್ ಹನೀಫ್ ಬಜ್ಪೆ, ಒಕ್ಕೂಟದ ಮೊಹಮ್ಮದ್ ಹನೀಫ್.ಯು, ಮುಸ್ತಫ ಸಿ. ಎಂ, ಅಬ್ದುಲ್ ಜಲೀಲ್ ಅದ್ದಾಕ, ಅಶ್ರಫ್ ಬದ್ರಿಯಾ, ಮೊಹಮ್ಮದ್ ಸಾಲಿಹ್ಹ್ ಬಜ್ಪೆ, ಕೆ. ಎಸ್.ಅಬೂಬಕ್ಕರ್ ಪಲ್ಲ ಮಜಲ್, ನೌಶಾದ್ ಬಂದರ್, ಸಿರಾಜ್ ಬಜ್ಪೆ, ಸಮೀರ್ ಆರ್.ಕೆ, ಅಶ್ರಫ್ ಬಜ್ಪೆ, ರಝಾಕ್ ಕರಂಬಾರ್ ಉಪಸ್ಥಿತರಿದ್ದರು.