ಮಂಗಳೂರು: ಕೊರೋಣ ಮಹಾಮಾರಿಯು ಇನ್ನಷ್ಟು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಕರೋನ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಅದರ ವಿರುದ್ಧ ಜಾಗೃತಿ ಮೂಡಿಸಬೇಕು ಈ ನಿಟ್ಟಿನಲ್ಲಿ ಜಿಲ್ಲಾ ಎಸ್ ವೈ ಎಸ್ ಟೀಂ ಇಸಾಬ ಕಾರ್ಯಾಚರಣೆಯು ಶ್ಲಾಘನೀಯ ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ಎಸ್ ವೈ ಎಸ್ ಜಿಲ್ಲಾ ವೆಸ್ಟ್ ಸಮಿತಿ ಹಮ್ಮಿಕೊಂಡ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಿ,ಎಚ್. ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ ವಹಿಸಿದರು.
ಮುಖ್ಯ ತರಬೇತುದಾರರಾಗಿ ಆಗಮಿಸಿದ ವೈದ್ಯಾಧಿಕಾರಿ ಡಾಕ್ಟರ್ ಶಿವ ಪ್ರಕಾಶ್ ಕೋರೋಣ ವೈರಸ್ಸನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದರ ಕುರಿತು ವಿವರಿಸಿದರು. ಡಾಕ್ಟರ್ ಫಿಲಿಪ್ಸ್ ಆಂಟನಿ ಎರಡನೇ ತರಬೇತು ನೀಡಿದರು.
ಎಸ್ ವೈ ಎಸ್ ರಾಜ್ಯ ನಾಯಕ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಮಯ್ಯಿತ್ ಪರಿಪಾಲನೆ ಕುರಿತು ವಿಷಯ ಮಂಡಿಸಿದರು.ಪ್ರತಿ ಸೆಂಟರ್ ಗಳಿಗೂ ಪಿಪಿಇ ಕಿಟ್ ವಿತರಿಸಲಾಯಿತು.ಎಸ್ ವೈ ಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಎಸ್ ಎಂ.ಬಶೀರ್ ಹಾಜಿ ಉಪಾಧ್ಯಕ್ಷ ಎಂಎಸ್ ಉಮಾರ್, ಮಾಸ್ಟರ್ ಜಿಲ್ಲಾ ನಾಯಕ ಸಿ.ಎಚ್ ಇಸ್ಮಾಯಿಲ್ ಕೆ.ಸಿ ರೋಡ್ ಮಾಸ್ಟರ್,ತಿಬ್ಲೆಪದವು ಮದ್ರಸ ಅಧ್ಯಕ್ಷ ಸಿದ್ದೀಕ್ ಮದನಿ ದೇರಳಕಟ್ಟೆ ಎಸ್ ವೈ ಎಸ್ ಸೆಂಟರ್ ಅಧ್ಯಕ್ಷ ಇಸ್ಮಾಯಿಲ್ ಸ ಅದಿ ಮುಂತಾದವರು ಉಪಸ್ಥಿತರಿದ್ದರು.
ಹನೀಫ್ ಸಖಾಫಿ ಸಹಕರಿಸಿದರು.
ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.ಟೀಂ ಇಸಾಬ ಜಿಲ್ಲಾ ಕಾರ್ಯದರ್ಶಿ ಎಂಕೆಎಂ ಇಸ್ಮಾಯಿಲ್ ಕಿನ್ಯ ಕೃತಜ್ಞತೆ ಸಲ್ಲಿಸಿದರು.