janadhvani

Kannada Online News Paper

ಪಿಯುಸಿ ಪರೀಕ್ಷೆಯಲ್ಲಿ ಹನೀನ್ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ

ಮಂಗಳೂರು: ಇಲ್ಲಿನ ಚೈತನ್ಯ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹನೀನ್‌ 554(92.3ಶೇ) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪಿಸಿಎಂಬಿ ಯಲ್ಲಿ 377 ಅಂಕ ಗಳಿಸಿ 94.4ಶೇ. ಫಲಿತಾಂಶ ದಾಖಲಿಸಿದ್ದಾರೆ.

ಇವರು ಕೈಕಂಬ ನಿವಾಸಿ ಹಾಜಿ ಮೊಹಮ್ಮದ್‌ ಹಬೀಬುಲ್ಲಾಹ್ ಹಾಗೂ ಸಾಜಿದ ಬಾನು ದಂಪತಿಯ ಪುತ್ರಿ.

ಇವರು ಮುಂದೆ ವೈದ್ಯಕೀಯ ಶಿಕ್ಷಣ ಮಾಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.