ದುಬೈ: ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮೊಟಕುಗೊಂಡಿದ್ದು ಯುಎಯಿ ಯಿಂದ ಭಾರತಕ್ಕೆ ರಜಾ ನಿಮಿತ್ತ ಮತ್ತು ಇತರ ಕಾರಣಗಳಿಂದ ಬಂದು ಬಾಕಿಯಾಗಿರುವ ಅನಿವಾಸಿಗಳಿಗೆ ಜುಲೈ 12 ರಿಂದ ವಾಪಾಸು ಹೋಗುವ ಅವಕಾಶ ನೀಡಲಾಗಿದೆ. ಈ ಸಂಭಂದ ಈಗಾಗಲೇ 4 ವಿಮಾನಯಾನ ಕಂಪನಿಗಳು ವಿವಿಧ ವಿಮಾನ ನಿಲ್ದಾಣಗಳಿಂದ ವಿಮಾನದ ವೇಳಾಪಟ್ಟಿಯನ್ನು ಪ್ರಕಟಿಸಿವೆ.
ಏರ್ ಇಂಡಿಯಾ ಎಕ್ಸ್ಪ್ರೆಸ್
ಕಣ್ಣೂರು – ದುಬೈ, ತಿರುವನಂತಪುರಂ-ದುಬೈ, ಕೋಝಿಕೋಡ್-ಶಾರ್ಜಾ, ಡೆಲ್ಲಿ-ಅಬುಧಾಬಿ, ಡೆಲ್ಲಿ-ಶಾರ್ಜಾ ವಿಮಾನಗಳು ಆದಿತ್ಯವಾರ ಹಾರಲಿದೆ.
ಎಮಿರೇಟ್ಸ್
ಬೆಂಗಳೂರು, ಡೆಲ್ಲಿ, ಕೊಚ್ಚಿ, ಮುಂಬೈ, ತಿರುವನಂತಪುರಂ ನಿಂದ ದುಬೈ ಗೆ ಹಲವು ವಿಮಾನಯಾನ ಸೇವೆ ನೀಡಲಿದೆ.
ಏರ್ ಅರೇಬಿಯಾ
ಅಹಮದಾಬಾದ್, ಬೆಂಗಳೂರು, ಕೊಯಂಬತ್ತೂರು, ಡೆಲ್ಲಿ, ಕಣ್ಣೂರು, ಕೊಚ್ಚಿ, ಕೋಝಿಕೋಡ್, ತಿರುವನಂತಪುರಂ, ಲಕ್ನೋ, ಮುಂಬೈ ನಗರಗಳಿಂದ ಶಾರ್ಜಾಗೆ ಸೇವೆ ನೀಡಲಿವೆ.
ಸ್ಪೈಸ್ ಜೆಟ್
ಡೆಲ್ಲಿ, ಮುಂಬೈ, ಕೋಝಿಕೋಡ್, ಕೊಚ್ಚಿಬಿಯಿಂದ ರಾಸ್ ಅಲ್ ಖೈಮಾಗೆ ಸೇವೆ ನೀಡಲಿವೆ.
ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು 96 ಗಂಟೆಗಳ ಮೊದಲು ನಡೆಸಿದ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರತಕ್ಕದ್ದು, ಐಸಿಎ/ರೆಸಿಡೆನ್ಸಿ ಇಲಾಖೆಯ ಅನುಮತಿ ಪತ್ರ ಹೊಂದಿರಬೇಕು, ಸ್ಥಿರ ಆರೋಗ್ಯ ಘೋಷಣಾ ಪತ್ರ ಹೊಂದಿರಬೇಕು, ಕೋವಿಡ್ 19 DXB ಅಥವಾ ಅಲ್ ಹೊಸ್ನ್ ಆಪ್ ಹೊಂದಿರಬೇಕು, ಕ್ವಾರಂಟೈನ್ ಗೆ ಬದ್ಧರಾಗುವ ದೃಢೀಕರಣವನ್ನೂ ನೀಡಬೇಕಿದೆ