ಸೌದಿ ಅರೇಬಿಯಾ : ವಿದೇಶಿಗರ ಎಕ್ಸಿಟ್ ರೀ ಎಂಟ್ರಿ ಮತ್ತು ವಿಸಿಟ್ ವಿಸಾಗಳ ಅವಧಿಯನ್ನು 3 ತಿಂಗಳ ಅವಧಿಗೆ ವಿಸ್ತರಿಸಿ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಆದೇಶ ಹೊರಡಿಸಿದ್ದಾರೆ.
ಕೊರೋನಾ ಕಾರಣ ಅಂತರರಾಷ್ಟ್ರೀಯ ವಿಮಾನಯಾನ ರದ್ದಾಗಿದ್ದು ಈ ಸಂದರ್ಭ ಅವಧಿ ಮುಗಿದ ವಿಸಿಟ್ ವೀಸಾ ಮತ್ತು ಎಗ್ಸಿಟ್ ರೀ ಎಂಟ್ರಿ ವಿಸಾಗಳನ್ನು ಇದೀಗ ಮತ್ತೆ 3 ತಿಂಗಳ ಸಮಯಕ್ಕೆ ವಿಸ್ತರಿಸಿದ್ದು ಅಲ್ಲದೆ ಹಲವು ವಿನಾಯ್ತಿಯನ್ನು ಘೋಷಿಸಿ ಸೌದಿ ಅರೇಬಿಯಾ ಮಾನವೀಯತೆ ಮೆರೆದಿದೆ.
1. ವಿಮಾನ ಸೇವೆಗಳನ್ನು ರದ್ದುಗೊಳಿಸಿರುವ ಕಾರಣ ಸ್ವದೇಶಕ್ಕೆ ಮರಳಲು ಸಾಧ್ಯವಾಗದ, ವಿದೇಶಿ ಪ್ರಜೆಗಳ ಅಂತಿಮ ನಿರ್ಗಮನ ವೀಸಾವನ್ನು ಉಚಿತವಾಗಿ ವಿಸ್ತರಿಸಲಾಗುವುದು.
2. ವಿಮಾನ ರದ್ದತಿಯಿಂದಾಗಿ, ರಜೆಯಲ್ಲಿ ಊರಿಗೆ ತೆರಳಿ ಮರಳಲು ಸಾಧ್ಯವಾಗದವರ, ಇಕಾಮಾ ಅವಧಿ ಮುಗಿದವರಿಗೆ ಮತ್ತು ಮುಗಿಯಲಿರುವವರಿಗೂ3 ತಿಂಗಳವರೆಗೆ ಉಚಿತವಾಗಿ ವಿಸ್ತರಿಸಲಾಗಿದೆ.
3. ವಿಮಾನ ಸೇವೆಗಳ ರದ್ದತಿಯಿಂದಾಗಿ, ರೀ ಎಂಟ್ರಿಯಲ್ಲಿ ದೇಶವನ್ನು ತೊರೆದವರ ರೀ ಎಂಟ್ರಿಯನ್ನು ಸ್ವಯಂಚಾಲಿತವಾಗಿ ವಿಸ್ತರಿಸಲಾಗಿದೆ.
4. ದೇಶದೊಳಗಿನ ಎಲ್ಲಾ ವಿದೇಶಿಯರ ಇಕಾಮಾವನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲಾಗುವುದು. ಪ್ರಸ್ತುತ ಇಕಾಮಾ ಕೊನೆಗೊಳ್ಳುವ ಎಲ್ಲರಿಗೂ ಸ್ವಯಂಚಾಲಿತವಾಗಿ ವಿಸ್ತರಿಸಿ ನೀಡಲಾಗುತ್ತದೆ.
5. ವಿಮಾನ ರದ್ದತಿಯಿಂದಾಗಿ, ಸಂದರ್ಶಕ ವಿಸಾದಲ್ಲಿ ಸೌದಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲಾ ಪ್ರವಾಸಿಗರಿಗೆ ವೀಸಾವನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗುವುದು.
ಸೌದಿ ದೊರೆ ಸಲ್ಮಾನ್ ರಾಜರ ಆದೇಶವು ಸೌದಿಯಲ್ಲಿರುವ ಎಲ್ಲಾ ವಲಸಿಗರಿಗೆ ಸಮಾಧಾನಕರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಸಾಗಳು ಸ್ವಯಂಚಾಲಿತವಾಗಿ ವಿಸ್ತರಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದಕ್ಕಾಗಿ ಜವಾಝಾತ್‌ಗೆ ತೆರಳಬೇಕಾಗಿಲ್ಲ.