janadhvani

Kannada Online News Paper

ಕೊರೋನ ಅನಾವರಣಗೊಳಿಸಿದ ನೈಜ ಗೆಳೆತನ

✍️ ಉನೈಸ್ ಸಖಾಫಿ ಅಲ್ ಅಫ್ಲಲಿ ನರಿಮೊಗರು_

ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನೂ ಅಪ್ಪಿಕೊಳ್ಳುತ್ತಿರುವ ಈ ಮಹಾಮಾರಿಯು ಕಲಿಸಿದ ಮತ್ತು ಕಲಿಸುತ್ತಿರುವ ಪಾಠವು ಅಷ್ಟಿಷ್ಟಲ್ಲ ಅದು ಹಲವು ವ್ಯಕ್ತಿತ್ವವನ್ನು ನಮ್ಮ ಮುಂದೆ ಜಗಜ್ಜಾಹಿರುಗೊಳಿಸಿದೆ.

ತಾನು ಅನುಕೂಲಸ್ಥನಾಗಿದ್ದಾಗ ತನ್ನೊಂದಿಗೆ ಅಮಿತವಾಗಿ ಗೆಳೆತನ ಬೆಳೆಸಿದವನು ಈ ಸಂಕಷ್ಟದ ಸಮಯದಲ್ಲಿ ತಿರುಗಿಯೂ ನೋಡದ ಗೆಳೆಯ ಒಂದೆಡೆ, ತಮಗೆ ಸಾಮರ್ಥ್ಯವಿರುವಾಗ ತಮ್ಮೆಲ್ಲಾ ಶಕ್ತಿ ಮೀರಿ ಶ್ರಮಿಸಿದ ಒಂದು ವರ್ಗವನ್ನು ಅವರ ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ನಿಸ್ಕರುಣೆಯಿಂದ ವರ್ತಿಸಿದ ಸಂಘಟನೆ ಮತ್ತು ಜಮಾಅತ್ ಗಳು ಮತ್ತೊಂದೆಡೆ.

ಯಾವುದಕ್ಕೂ ಸಾಲದ ಕಿಟ್ ಗಳನ್ನು ವಿತರಿಸಿ ಆ ಕಿಟ್ ನಲ್ಲಿದ್ದ ವಸ್ತುಗಳು ಮುಗಿದರೂ ಅದರೊಂದಿಗೆ ತೆಗೆದ ಪೋಟೋ ಗಳು ವಾರ ಅಥವಾ ತಿಂಗಳುಗಟ್ಟಲೆ ತಮ್ಮ ಸ್ಟಾಟಸ್ ಪ್ರೊಫೈಲ್ ಗಳಲ್ಲಿ ಪ್ರದರ್ಶಿಸುತ್ತಿರುವ ಪ್ರಚಾರ ಪ್ರಿಯರು. ಆರ್ಥಿಕವಾಗಿ ನಮ್ಮ ಸಂಘಟನೆಯು ಸಹಾಯ ಮಾಡಲು ಉದ್ದೇಶಿಸಿದ್ದು ತಮ್ಮ ಹೆಸರನ್ನು ನೊಂದಾಯಿಸುತ್ತೇವೆ ಎಂದು ಕರೆ ಮಾಡಿ ಕೇಳಿದಾಗ ತಮ್ಮ ಆರ್ಥಿಕ ಶೋಚನೀಯ ಪರಿಸ್ಥಿತಿ ಕಾರಣ ಅಭಿಮಾನವನ್ನು ಪಕ್ಕಕ್ಕಿಟ್ಟು ಅದಕ್ಕೆ ಸಮ್ಮತಿಸಿ ನಿಗದಿತ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ವಿತರಿಸುವ ಕಾರ್ಯಕ್ರಮವಿದ್ದು ಅಲ್ಲಿ ತಾವು ಹಾಜರಿರಬೇಕೆಂದು ಹೇಳಿ ಅಲ್ಲಿಗೆ ಹೋದಾಗ ಸೀಮಿತ ವ್ಯಕ್ತಿಗಳಿಗೆ ಸಹಾಯ ಮಾಡಿ ನಿಮಗೆ ಮತ್ತೆ ಕೊಡುವೆವು ಎಂಬ ಹುಸಿ ಭರವಸೆಯ ಮಾತನ್ನಾಡಿ ಅಲ್ಲಿಂದ ಬರಿ ಕೈಯಲ್ಲಿ ಹಿಂದಿರುಗಿಸಿ ಇಷ್ಟರ ತನಕ ಭರವಸೆ ನೆರವೇರಿಸದಿದ್ದರೂ ಮಾದ್ಯಮಗಳ ವರದಿಯಲ್ಲಿ ಇವರನ್ನೂ ಸೇರಿಸಿ ಲೆಕ್ಕಕ್ಕುಂಟು ಮಾಡಿದವರು.

ತನ್ನ ಊರಿನ ಅಥವಾ ನೆರೆಹೊರೆಯ ವ್ಯಕ್ತಿಯು ಪ್ರಯಾಸ ಅನುಭವಿಸುತ್ತಿರುವುದನ್ನು ಅರಿತೂ ಜಾಣ ಕುರುಡು ತೋರಿ ತನ್ನ ಊರಿನವರಲ್ಲದ ವ್ಯಕ್ತಿಗಳಿಗೆ ದಾನ ಮಾಡಿ ತಾನು ಪತ್ರಿಕೆಯಲ್ಲೋ ಸಾಮಾಜಿಕ ಜಾಲತಾಣಗಳಲ್ಲೋ ಸಮಾಜ ಸೇವಕ ಎಂಬ ಹೆಸರಿನಿಂದ ಕರೆಸಿಕೊಂಡ ತೋರಿಕೆಯ ಸಮಾಜ ಸೇವಕ. ಹೀಗೇ ಮುಂದುವರಿಯುತ್ತೆ ಈ ವ್ಯಾಗ್ರ ಮುಖಗಳು.

ಮುಸಲ್ಮಾನರು ಪರಸ್ಪರ ಸಹೋದರರು, ವಿಶ್ವಾಸಿಗಳು ಒಂದು ಕಟ್ಟಡವಿದ್ದ ಹಾಗೆ ಅದರ ಒಂದೊಂದು ಭಾಗವು ಮತ್ತೊಂದನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ ಒಬ್ಬ ಮುಸಲ್ಮಾನ ಮತ್ತೊಬ್ಬಾತನ ಸುಖ ದುಃಖಗಳಲ್ಲಿ ಭಾಗಿಯಾಗುತ್ತಾನೆ, ಆತನೇ ನೈಜವಾದ ವಿಶ್ವಾಸಿ ಎಂದಾಗಿದೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ವಚನ.

ಮಹಾನರಾದ ಮಹ್ಮೂದುಲ್ ಖಾಹಿರಿ (ರ. ಅ) ಹೇಳಿದಂತೆ
*_لَيْسَ الْقَرِيبُ قَرِيبًا فِي غِنَاكَ كَمَا_*
*_حَفَّتْ غَدِيرًا وَفِيهِ الْحُوتُ أَطْيَارُ_*
*_بَلْ لَازِمُونَكَ فِي فَقْرٍ وَفِي سَعَةٍ_*
*_كَمَا يَدُومُ بِهِ لَنَوْفَرٌ جَارٌِ_*

ಕೊಳದಲ್ಲಿ ಮೀನುಗಳು ಇರುವಾಗ ಮಾತ್ರ ಅದನ್ನು ಮುತ್ತಿಕೊಳ್ಳುವ ಹಕ್ಕಿಗಳ ಹಾಗೆ ನಿನ್ನ ಕ್ಷೇಮ ಕಾಲದಲ್ಲಿ ಮಾತ್ರ ನಿನ್ನನ್ನು ಸಂಪರ್ಕಿಸುವವನು ನಿನ್ನ ನೈಜವಾದ ಗೆಳೆಯನಲ್ಲ.ಹೊರತು ಮೀನು ಇದ್ದರೂ ಇರದಿದ್ದರೂ ಆ ಕೊಳದಲ್ಲಿಯೇ ವಾಸಿಸುವ ತಾವರೆಯ ಹಾಗೆ ನಿನ್ನ ಕ್ಷೇಮ ಕ್ಷಾಮ ಕಾಲದಲ್ಲಿ ನಿನ್ನೊಂದಿಗೆ ಇರುವವನಾಗಿದ್ದಾನೆ ನೈಜ ಗೆಳೆಯ!!!ಬನ್ನಿ ನಾವೆಲ್ಲರೂ ನೈಜ ವಿಶ್ವಾಸಿಗಳಾಗಿ ಬಾಳೋಣ

error: Content is protected !! Not allowed copy content from janadhvani.com