ಮೂಲ ಮಳಯಾಲಂ: ಮಜೀದ್ ಪುತ್ತೂರು
ಕನ್ನಡಕ್ಕೆ: ಎ.ಕೆ.ನಂದಾವರ
ಮರ್ಕಝ್ ನಾಲೇಡ್ಜ್ ಸಿಟಿಗಾಗಲೀ, ಕಾಂತಪುರಂ ಉಸ್ತಾದ್ ಗಾಗಲೀ, ಡೈರೆಕ್ಟರ್ ಡಾ.ಅಝ್ಹರಿಗಾಗಲೀ ಇಂದು ವಿರೋಧಿಗಳಿಲ್ಲ.
ವಿರೋಧಗಳು ಹೊಗೆಯಾಡಿದ್ದ ಒಂದು ಕಾಲವು ಕಳೆದು ಹೋಯಿತು. ಸಂಕಷ್ಟಗಳ ಕೆಂಡಗಳನ್ನೂ ಪ್ರಯಾಸಗಳ ಹಿಮಾಲಯವನ್ನೂ ದಾಟಿ ನಾಲೆಡ್ಜ್ ಸಿಟಿ ಇಲ್ಲಿಯ ತನಕ ಬಂದು ಮುಟ್ಟಿದೆ. ಪರಿಪೂರ್ಣತೆಗೆ ತಲುಪಲು ಕೆಂಡದ ಮೇಲಿನ ನಡಿಗೆ ಇನ್ನೂ ಬೇಕಾದೀತು, ಪ್ರಸ್ತುತ ಸ್ಥಿತಿಗತಿಯು ಸಂತಸದಾಯಕವಾಗಿದೆ. ಶಿಕ್ಷಣ ಮತ್ತು ಉದ್ಯೋಗವು ಮಾನವ ಜೀವನದ ಜೀವಾಳವಾಗಿದೆ. ಅವುಗಳೆರಡೆ ವಿಶಾಲ ಬಾಗಿಲುಗಳು ತೆರೆಯಲ್ಪಟ್ಟಿವೆ. ಗುಂಪುಗಾರಿಕೆಯ ಮನಧೋರಣೆಗಳಿಗೆ ಅತೀತವಾಗಿ ಸಮಾಜವು ಅದನ್ನು ಅನುಭವಿಸಲಾರಂಭಿಸಿದೆ. ಸಂಘಟನಾಭಿನ್ನತೆಗಳನ್ನು ಮರೆತು ನಾಲೇಡ್ಜ್ ಸಿಟಿಯನ್ನು ನೋಡಲೂ ಅಭಿಪ್ರಾಯ ಹಂಚಿಕೊಳ್ಳಲೂ ಈಗ ಇಲ್ಲಿಗೆ ಹಲವರು ಬರುತ್ತಿದ್ದಾರೆ.
ಎಲ್ಲರಿಗಾಗಿ ಸಹಬಾಳ್ವೆಯ ಕದವನ್ನು ತೆರಿದಿಟ್ಟಿದ್ದಾರೆ ಕಾಂತಪುರಂ ಉಸ್ತಾದ್.
ನಾಲೇಜ್ಡ್ ಸಿಟಿಯಿಂದ ಹೊರ ಬರುವ ಪ್ರಾಡಕ್ಟ್ ಗಳು ನಾಡಿಗೂ ಸಮಾಜಕ್ಕೂ ಆಸ್ತಿಯೆಂದು ಎಲ್ಲರಿಗೂ ಈಗ ಮನದಟ್ಟಾಗಿದೆ.
ನಿನ್ನೆ ದಿನ ಆನ್ಲೈನ್ ಮೂಲಕ ಎನ್ರೋಲ್ ಮಾಡಿ ಕಾನೂನು ಪದವಿ ಪಡೆದಿರುವ ಮರ್ಕಝ್ ಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸಲು ಹಲವರು ಮುಂದೆ ಬಂದಿರುವುದು ಸಮಾಜದಲ್ಲಿ ಉಂಟಾದ ಸಕಾರಾತ್ಮಕ ಬದಲಾವಣೆಯ ಭಾಗವಾಗಿದೆ. ಚೆಮ್ಮಾಡ್ ದಾರುಲ್ ಹುದಾದಲ್ಲಿ ಪಾಣಕ್ಕಾಡ್ ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಹಾಗೂ ಡಾ.ಬಹಾವುದ್ದೀನ್ ನದ್ವಿಯವರ ನೇತೃತ್ವದಲ್ಲಿ ಅಡ್ವಕೇಟ್ ಮುಝಮ್ಮಿಲ್ ಉವೈಸ್ ಗೆ ಸನ್ಮಾನಿಸಿದ್ದು, ಕಾಸರಗೋಡ್ ಬಲ್ಲಾಕಡಪುರದಲ್ಲಿ ಅಡ್ವಕೇಟ್ ರಿಝ್ವಾನರಿಗೆ ಅಭಿನಂದನೆ ಸಲ್ಲಿಸಿ ಮುಸ್ಲಿಮ್ ಲೀಗ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಬ್ಯಾನರ್ ಅಳವಡಿಸಿದ್ದು, ಅಝೀಝ್ ತರುವಣ ರಿಂದ ಶ್ರೀಜಾ ನೆಯ್ಯಾಟ್ಟಿಲ್‌ಕರ ತನಕ ಮರ್ಕಝನ್ನು ಮುಕ್ತಕಂಠದಿಂದ ಪ್ರಶಂಸಿಸಿ ಲೇಖನ ಬರೆದದ್ದು, ಎತ್ತಿ ತೋರಿಸಬೇಕಾದ ವಿಚಾರ.
ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಮರ್ಕಝ್ ಲಾ ಕಾಲೇಜು ಹಾಗೂ ನಾಲೇಜ್ ಸಿಟಿಯೇ ತುಂಬಿ ಹೋಗಿದೆ.
ಇದನ್ನೆಲ್ಲಾ ಹೇಳುವಾಗಲೂ ಸೋಷಿಯಲ್ ಮೀಡಿಯಾದ ಕೆಲವು ಅಶುಭಕರ ಕೃತ್ಯಗಳನ್ನೂ ಹೇಳದೆ ಇರಲಾಗದು. ಕೆಲವು ಅತಿರೇಕಿಗಳೋ, ಅಥವಾ ಪರಸ್ಪರ ಎತ್ತಿಕಟ್ಟಲೆಂದೇ ಟೊಂಕ ಕಟ್ಟಿದವರೋ ತೋರಿಸುತ್ತಿರುವ ವಿಕೃತಿಗಳು ಹೊಸಬೆಳವಣಿಗೆಯ ಸಂದರ್ಭ ಶೋಭೆಯಲ್ಲ. ತಪ್ಪು ತಿಳುವಳಿಕೆಯಿಂದಲೋ ಅತಿವಿರೋಧ ದಿಂದಲೋ ಒಂದು ಕಾಲದಲ್ಲಿ ನಾಲೆಡ್ಜ್ ಸಿಟಿಯ ವಿರುದ್ಧ ಕಠಿಣ ನಿಲುವು ತಳೆದವರು, ಕಠೋರ ಪದಗಳಲ್ಲಿ ಆಕ್ಷೇಪಿಸಿದವರು ಹಾಗೂ ಅಪಹಾಸ್ಯ ಮಾಡಿದವರಿದ್ದಾರೆ. ಅವರಲ್ಲುಂಟಾಗಿರುವ ಪರಿವರ್ತನೆ, ಸುನ್ನಿಐಕ್ಯ ಚರ್ಚೆಯಿಂದ ಹುಟ್ಟಿದ ನಿಲುವುಗಳನ್ನು ಇಟ್ಟು ನೋಡುವಾಗ ಹಳೆಯ ಕ್ಲಿಪ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟಿಸುವುದು ಹಾಗೂ ಶೇರಿಸುವುದು ಅಕ್ಷಮ್ಯವಾಗಿದೆ. ಪ್ರಮುಖವಾಗಿ ಎರಡ್ಮೂರು ಜನರ ಹಳೆಯ ಕ್ಲಿಪ್ ಗಳು ಅನಾವಶ್ಯಕವಾಗಿ ಹರಿಯಬಿಡಲಾಗುತ್ತಿರುವುದು. ಅವರ ಹೆಸರು ಉಲ್ಲೇಖಿಸುವುದು ಅನಿವಾರ್ಯವಾಗಿದೆ.
ಒಂದು ಮುಸ್ತಫಾ ಮುಂಡುಪಾರ, ಇನ್ನೊಂದು ತೋಟ್ಟುಮುಖಂ, ರಾಮಂದಳಿ!
ಸುನ್ನಿ ಐಕ್ಯದ ಚರ್ಚೆಯ ಸೂತ್ರಧಾರರಲ್ಲಿ ಒಬ್ಬರಾಗಿದ್ದಾರೆ ಮುಸ್ತಫಾ ಮಾಸ್ಟರ್. ಹಲವು ಏರಿಳಿತಗಳನ್ನು ದಾಟಿ ಈ ಮಟ್ಟಕ್ಕೆ ತಲುಪಿಸುವುದರಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಈಗ ಅವರು ನಮ್ಮ ನಾಯಕರೊಂದಿಗೆ ಅಭಿಪ್ರಾಯ ನಡೆಸುತ್ತಿದ್ದಾರೆಂದೂ ಗೊತ್ತು.
ಕಳೆದ ಮಾರ್ಚ್ 13, 14 ದಿನಾಂಕಗಳಲ್ಲಿ ಹೊರಗಿನವರಿಗಾಗಿ ನಾಲೇಡ್ಜ್ ಸಿಟಿಯಲ್ಲಿ ಒಂದು ಸ್ನೇಹಸಂದರ್ಶನ ಕಾರ್ಯಕ್ರಮ ಆಯೋಜಿಸಿದಾಗ ಅದರ ಪ್ರತಿನಿಧಿಯಾಗಿ ಮುಂಡುಪ್ಪಾರರನ್ನು ಆಹ್ವಾನಿಸಲು ನಾವು ಮೂವರು ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಉತ್ತಮ ಆಸಕ್ತಿಯೊಂದಿಗೆ ಅವರು ನಮ್ಮನ್ನು ಬರಮಾಡಿಕೊಂಡು, ವಿಷಯವನ್ನು ಕೇಳಿತಿಳಿದುಕೊಂಡರು. ಎಲ್ಲಾ ಬೆಂಬಲವನ್ನು ವಾಗ್ದಾನ ಮಾಡುವುದರೊಂದಿಗೆ ; ಹಕೀಮ್ ಅಝ್ಹರಿಯವರು ಹಲವು ಬಾರಿ ಅತ್ತ ಆಹ್ವಾನಿಸಿದ್ದರೆಂದೂ ಈ ಕಾರ್ಯಕ್ರಮಗಳಲ್ಲಿ ಒಂದು ಸಮಯಕ್ಕೆ ಬರುವೆನೆಂದು ಹೇಳಿದರು. ಕೋರೋನಾ ಕಾರಣದಿಂದ ಆ ಕಾರ್ಯಕ್ರಮ ರದ್ದಾಗಿದೆ, ಅಂತಹ ವ್ಯಕ್ತಿ ಒಂದು ಕಾಲದಲ್ಲಿ ನಾಲೆಡ್ಜ್ ಸಿಟಿಯನ್ನು ಟೀಕಿಸಿ ನಡೆಸಿದ ಭಾಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಇಂದೂ ಹರಿದಾಡುವುದು ಸಮಂಜಸವಲ್ಲ.
ಇನ್ನು ತೋಟುಮುಖರ ವಿಷಯ! ಇತ್ತೀಚೆಗೆ ಹಳೆಯ ಆಲೋಚನಾಕ್ರಮಗಳಿಂದ ಅವರು ಬದಲಾಗಿ ಮಾನಸಿಕ ಪರಿವರ್ತನೆಯಾಗಿದೆ ಎಂಬ ಮಾಹಿತಿ ಇದೆ. ಕಳೆದ ರಬೀಉಲ್ ಅವ್ವಲ್ ತೋಟುಮುಖದ ಸುನ್ನಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಹಳೆಯದನ್ನೆಲ್ಲಾ ಬಿಟ್ಟು ಇನ್ನು ಗ್ರೂಪಿಸಂ ಗೆ ತಾನಿಲ್ಲ ಎಂದು ನನ್ನ ಗೆಳೆಯನೊಬ್ಬನಲ್ಲಿ ಹೇಳಿದ್ದಾರೆ ಕೂಡ. ಆರು ತಿಂಗಳ ಮೊದಲು ಪೋನ್ ಮೂಲಕ ಒಂದಲ್ಪ ಸಂವಾದಿಸಿದಾಗಲೂ ಬದಲಾವಣೆಯು ಪ್ರಕಟಗೊಂಡಿತ್ತು. ಹಾಗಿರುವಾಗ ‘ನಾಲೆಡ್ಜ್ ಸಿಟಿಗೆ ಐದು ಸೆಂಟ್ಸ್ ಕೂಡ ಇಲ್ಲ’ ಎಂಬ ಹಳೆಯ ಭಾಷಣವನ್ನು ಯಾಕೆ ನಾವು ಶೇರ್ ಮಾಡಬೇಕು?
ಆದರ್ಶ ವಿವರಣೆ ಎಂಬ ಹೆಸರಲ್ಲಿ ನನ್ನನ್ನು ವ್ಯಕ್ತಿಗತವಾಗಿ ಗುರಿಯಿಟ್ಟು ಭಾಷಣ ಮಾಡಲು ಪುತ್ತೂರಿಗೆ ಬಂದಿದ್ದ ರಾಮಂದಳಿಯೊಂದಿಗೆ ಐದು ತಿಂಗಳು ಮೊದಲು ಮಾತನಾಡಿದಾಗ ಅವರಲ್ಲೂ ದೊಡ್ಡ ಬದಲಾವಣೆ ವ್ಯಕ್ತವಾಗಿತ್ತು.
ಐಕ್ಯ ಚರ್ಚೆ ಮುಂದುವರಿಯಬೇಕೆಂದೂ ಸಮುದಾಯವು ಅದನ್ನು ಬಯಸುತ್ತಿದೆಯೆಂದೂ ಹೇಳಿದ ರಾಮಂದಳಿ; ನಿರಂತರವಾಗಿ ನಾನು ಬರೆದ ‘ಐಕ್ಯತ್ತಿಂಡೆ ಶೀಲುಗಳುಯರುನ್ನು’ ಎಂಬ ಟಿಪ್ಪಣಿಗಳನ್ನು ಓದಿ ಖುಷಿಯಾಯಿತೆಂದು ಹೇಳಿದ್ದರು.
ಒಟ್ಟಿನಲ್ಲಿ ಆದರ್ಶ, ಒಳಿತು, ದೀನಿ ದಅವಾ ನಮ್ಮ ಲಕ್ಷ್ಯವಾಗಿದ್ದರೆ; ಯಾರೂ ಅನ್ಯರಲ್ಲ ಎಂಬ ಮನೋಧೋರಣೆಯೊಂದಿಗೆ ರಂಗಕ್ಕಿಳಿಯಬೇಕು.
ಕಾಂತಪುರಂ ಉಸ್ತಾದ್ ಮತ್ತು ನಾಲೆಡ್ಜ್ ಸಿಟಿಯ ವಿಜಯದ ಗುಟ್ಟು ಕೂಡ ಅದೇ ಆಗಿದೆ.