ಬೆಂಗಳೂರು: ಕೊರೋನಾ ರೋಗವು ಜೀವನವನ್ನೇ ಆಯೋಮಯ ಮಾಡಿದ್ದು ನಗರದಲ್ಲಿ ಟ್ಯಾಕ್ಸಿ ಚಲಾಯಿಸಿ ಹೊಟ್ಟೆಪಾಡು ಮಾಡುತ್ತಿದ್ದ ಚಾಲಕರು ಇದೀಗ ತಮ್ಮ ಹೊಟ್ಟೆಪಾಡು ಮಾಡಲು ತಾವು ಚಲಾಯಿಸುತ್ತಿದ್ದ ವಾಹನಗಳನ್ನು ಸಂಚಾರಿ ಅಂಗಡಿಗಳನ್ನಾಗಿ ಪರಿವರ್ತಿಸಿದ್ದಾರೆ.
43 ವರ್ಷದ ಸರವನ ಕುಮಾರ್ ನಗರದಲ್ಲಿ ಟ್ಯಾಕ್ಸಿ ಚಲಾಯಿಸಿ ತಮ್ಮ 2 ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸಿ ತಮ್ಮ ಜೀವನವನ್ನೂ ನಡೆಸುತ್ತಿದ್ದರು ಆದರೆ ಲಾಕ್ ಡೌನ್ ಕಾರಣ 3 ತಿಂಗಳಿನಿಂದ ಕೆಲಸ ಕಳೆದುಕೊಂಡಿದ್ದು ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿತ್ತುಜ್ ಇದೆ ಸಂದರ್ಭ ವಿಜಯ ನಗರ ದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ತನ್ನ ಸಹೋದರನೂ ಅಂಗಡಿ ಬಾಡಿಗೆ ಕೊಡಲು ಸಾಧ್ಯವಾಗದೇ ಅಂಗಡಿ ಖಾಲಿ ಮಾಡಿ ಎಲ್ಲಾ ಸ್ಟಾಕ್ ಅನ್ನು ಮನೆಯಲ್ಲೇ ಇರಿಸಿದ್ದರು. ಇದೀಗ ಸರವನ ಕುಮಾರ್ ಈ ಬಟ್ಟೆ ಗಳನ್ನು ತನ್ನ ಟ್ಯಾಕ್ಸಿ ವಾಹನದಲ್ಲಿ ತುಂಬಿಸಿ ಮಾರ್ಗದ ಬದಿಯಲ್ಲಿ ಮಾರುತ್ತಿದ್ದಾರೆ.
ಇದು ಸರವನ ಕುಮಾರ್ ಒಬ್ಬರ ಕಥೆಯಲ್ಲ ಇಂತಹ ಸುಮಾರು 40 ಕ್ಯಾಬಿ ಗಳು ಬಟ್ಟೆ, ಪ್ಲಾಸ್ಟಿಕ್ ವಸ್ತುಗಳು, ತೆಂಗಿನಕಾಯಿ, ಆಹಾರ ಇತ್ಯಾದಿಗಳನ್ನು ತಮ್ಮ ವಾಹನದಲ್ಲೇ ತುಂಬಿಸಿ ರಸ್ತೆಯ ಬದಿ ಮಾರುತ್ತಿರುವುದು ಕಂಡು ಬರುತ್ತಿದೆ.