ರಾಸ್ ಅಲ್ ಖೈಮಾ : ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ತನ್ನ ಮಗನಿಗೆ ಹೊಸ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಲು ಊರಿಗೆ ಹೊರಟ ಪ್ರವಾಸಿ ತಂದೆಯೊಬ್ಬರು ಏರ್ ಪೋರ್ಟಿನಲ್ಲೇ ಮರಣಕ್ಕೆ ತುತ್ತಾಗಿರುವ ಘಟನೆ ಮಂಗಳವಾರ ವರದಿಯಾಗಿದೆ.
ಚಿನ್ನದ ವ್ಯಾಪಾರಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯವರಾದ ಪವಿತ್ರನ್ ಮಂಚಕ್ಕಲ್ (50) ಎಂಬವರೇ ಈ ದುರ್ಧೈವಿ. ಕೊರೋನಾ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಕೆಲಸ ಕಳೆದುಕೊಂಡ ಪವಿತ್ರನ್ ಗೆ ಗೆಳೆಯರೊಬ್ಬರು ಊರಿಗೆ ಮರಳುವ ಚಾರ್ಟರ್ಡ್ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ತನ್ನ ಮಗ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದ ವಿವರ ಲಭಿಸಿದ ಇವರು ಅತೀವ ಸಂತೋಷದಲ್ಲಿದ್ದರು. ಮಂಗಳವಾರ ರಾತ್ರಿ 11.30 ಕ್ಕೆ ಹೊರಡಬೇಕಿದ್ದ ವಿಮಾನಕ್ಕೆ ಸಾಯಂಕಾಲ 6.30 ಕ್ಕೆ ವಿಮಾನ ನಿಲ್ದಾಣ ತಲುಪಿದ್ದರು.
ಪವಿತ್ರನ್ ರವರ ಮರಣ ವಾರ್ತೆ ಲಭಿಸಿದ ಬಳಿಕ ಯುಎಇ ಮೂಲದ ಹೆಲ್ತ್ ಕೇರ್ ಕಂಪನಿಯ ಡೈರೆಕ್ಟರ್ ಡಾ ಸಂಶೀರ್ ವಾಯಲಿಲ್ ಅವರ ಮಗಳನ್ನು ತಾನು ಉನ್ನತ ವಿದ್ಯಾಭ್ಯಾಸ ಪಡೆಯಲು ಸಹಾಯ ಮಾಡುವುದಾಗಿ ಹೇಳಿದ್ದೂ ಅಲ್ಲದೆ ಪವಿತ್ರನ್ ಕುಟುಂಬಕ್ಕೆ 5 ಲಕ್ಷ ರೂಗಳ ಸಹಾಯ ಹಸ್ತವನ್ನೂ ನೀಡಿದ್ದಾರೆ.






