ರಾಸಲ್ ಖೈಮಾ: ಕೋವಿಡ್ ಮಹಾಮಾರಿಯ ಪರಿಣಾಮ ಅರಬ್ ಮರುಭೂಮಿಯಲ್ಲಿ ಏಕಾಂಗಿಯಾಗಿ, ಊರಿಗೆ ಪ್ರಯಾಣಿಸಲು ಟಿಕೆಟ್ ಖರೀದಿಸುವ ಹಣವಿಲ್ಲದೆ ಸಂಕಷ್ಟಕ್ಕೀಡಾಗಿದ್ದ, ಉಚಿತ ಪ್ರಯಾಣಕ್ಕೆ ಅರ್ಹರಾದ 187 ಮಂದಿಗೆ ಸಂಪೂರ್ಣ ಉಚಿತ ಪ್ರಯಾಣವನ್ನು ಏರ್ಪಡಿಸಿದ್ದ, ಕಾರಂದೂರ್ ಮರ್ಕಝ್ ನ ಚಾರ್ಟರ್ಡ್ ವಿಮಾನವು ಯುಎಇಯ ರಾಸಲ್ ಖೈಮಾದಿಂದ ಕ್ಯಾಲಿಕಟ್‌ಗೆ ತಲುಪಿದೆ.
ಭಾರತೀಯ ಗ್ರ್ಯಾಂಡ್ ಮುಫ್ತಿ ಮತ್ತು ಮರ್ಕಝ್ ಚಾನ್ಸೆಲರ್ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ನಿರ್ದೇಶನದಲ್ಲಿ ಜಾಮಿಯಾ ಮರ್ಕಝ್ ಉಚಿತ ಚಾರ್ಟರ್ ವಿಮಾನವನ್ನು ಏರ್ಪಡಿಸಿತ್ತು.
ದೀರ್ಘ ಕಾಲದಿಂದ ವೀಸಾ ರದ್ದುಗೊಂಡು ಸಂಕಷ್ಟದಲ್ಲಿದ್ದ 73 ಪ್ರಯಾಣಿಕರು, ಬಳಲುತ್ತಿದ್ದಾರೆ. ಉದ್ಯೋಗ ನಷ್ಟಗೊಂಡ 87 ಕಾರ್ಮಿಕರು, 8 ತುರ್ತು ವೈದ್ಯಕೀಯ ಸೇವೆಯ ಅಗತ್ಯವಿರುವವರು, 3 ಗರ್ಭಿಣಿಯರು, ಉದ್ಯೋಗ ಕಳೆದುಕೊಂಡ 11 ಕುಟುಂಬಗಳು, ಮಕ್ಕಳು, ವೃದ್ಧರು ಮತ್ತು ಸಂದರ್ಶಕ ವೀಸಾದಲ್ಲಿ ಭೇಟಿ ನೀಡಿ ಸಿಲುಕಿದವರು ಈ ಪ್ರಯಾಣಿಕರಲ್ಲಿ ಸೇರಿದ್ದಾರೆ.
ಕೋವಿಡ್ ಸನ್ನಿವೇಶದಲ್ಲಿ, ವಾರಗಳ ಹಿಂದೆ, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಉಚಿತ ವಿಮಾನದ ಆಲೋಚನೆಯನ್ನು ಮುಂದಿಟ್ಟಿದ್ದರು. ಮರ್ಕಝ್ ಮತ್ತು ಕೇರಳ ಮುಸ್ಲಿಂ ಜಮಾಅತ್ ನ ಪರಿಶ್ರಮದಿಂದ ಈಗಾಗಲೇ ಐಸಿಎಫ್ ಮತ್ತು ಮರ್ಕಝ್ ಅಲುಮ್ನಿ ಮೂಲಕ ಸಾವಿರಾರು ಮಂದಿ ಅನಿವಾಸಿಗಳಿಗೆ ಪ್ರಯಾಣಿಸಲು ಅವಕಾಶ ಲಭಿಸಿದೆ.
ಟಿಕೆಟ್ ಖರೀದಿಗೆ ಹಣವಿಲ್ಲದ ಕಾರಣ ಊರಿಗೆ ಮರಳಲು ಸಾಧ್ಯವಾಗದೆ ಸಂಕಷ್ಟದಲ್ಲಿರುವವರಿಗೆ ಉಚಿತ ಚಾರ್ಟರ್ಡ್ ವಿಮಾನವನ್ನು ಆಯೋಜಿಸಲಾಗಿದೆ ಎಂದು ಯುಎಇ ಮರ್ಕಝ್ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕ ಡಾ.ಸಲಾಮ್ ಸಕಾಫಿ ಎರಂಞಿಮಾವ್ ಮಾಧ್ಯಮಗಳೊಂದಿಗೆ ಹೇಳಿದರು.
Abdulla Raza Razvi