ಇಕ್ಬಾಲ್ ಬಾಳಿಲ(ರಾಜ್ಯ ತರಬೇತುದಾರ ಎಸ್ಕೆ,ಎಸ್ಸೆಸ್ಸೆಫ್ ಟ್ರೆಂಡ್)
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಗ್ಗೆ ಬಹಳಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು
ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ತೀರ್ಮಾನಕ್ಕೆ ಬರಬೇಕಾಗಿದೆ.
ಈಗಾಗಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಜೂನ್ 25ರಿಂದ ಜುಲೈ 3ರ ತನಕದ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಗೊಳಿಸಿರುತ್ತದೆ.
ಅದರಲ್ಲಿ ಶಾಲಾ ಅಭ್ಯರ್ಥಿಗಳಿಗೆ ಸೂಚಿಸಲಾಗಿರುವ ನಿಯಮ ಮಾತ್ರವಾಗಿರದೆ ಇನ್ನಷ್ಟು ಪ್ರಮುಖ ವಿಚಾರಗಳ ಬಗ್ಗೆ ತಿಳಿಸುವುದು ಅನಿವಾರ್ಯ.
ಕೋವಿಡ್ 19 ಕೊರೋನಾ ಸೋಂಕು ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ನಮ್ಮ ರಾಜ್ಯವು ಇದಕ್ಕೆ ಹೊರತಾಗಿಲ್ಲ.
ಇಂತಹಾ ಭಯದ ವಾತಾವರಣದಲ್ಲಿ ಪರೀಕ್ಷೆ ನಡೆಸುವಾಗ ಸರಕಾರ, ಶಿಕ್ಷಣ ಇಲಾಖೆ, ಶಾಲಾ ಸಮಿತಿ, ಶಿಕ್ಷಕವೃಂದ, ಪೋಷಕರು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರಲ್ಲೂ ಜವಾಬ್ದಾರಿ ತುಂಬಿರುತ್ತದೆ.
ಈಗಾಗಲೇ ಪರೀಕ್ಷಾ ಮಂಡಳಿಯು ಹೊರಡಿಸಿದ ಸೂಚನೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರತೀ ಅಭ್ಯರ್ಥಿಯನ್ನು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸುವುದು, ಕೈಗಳನ್ನು ಸ್ಯಾನಿಟೈಸರಿನಿಂದ ಶುದ್ದೀಕರಿಸುವುದು, ಹಾಗೂ ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವ ಬಗ್ಗೆ ತಿಳಿಸಲಾಗಿದೆ.
ಆದರೆ ಅಷ್ಟಕ್ಕೆ ಸೀಮಿತಗೊಳಿಸಿದರೆ ಪರೀಕ್ಷೆ ಬರೆಯಲು ಅಸಾಧ್ಯ.
ಇನ್ನಷ್ಟು ಪ್ರಮುಖ ನಿಯಮಗಳನ್ನು ಮಂಡಳಿಯೂ ಅಭ್ಯರ್ಥಿಗಳಿಗೆ ನೀಡುವ ಪತ್ರದಲ್ಲಿ
ಉಲ್ಲೇಖಿಸಬೇಕಿದೆ.ಪ್ರಮುಖವಾಗಿ ನಿರ್ವಹಿಸಬೇಕಾದ ಜವಾಬ್ದಾರಿಗಳು
ಮೊದಲು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿಸಬೇಕು.ಭಯದ ವಾತವರಣದಿಂದ ಹೊರಬರಲೇ ಬೇಕು ಇಲ್ಲದಿದ್ದರೆ ಪರೀಕ್ಷೆಯಲ್ಲಿ ನಿರೀಕ್ಷಯಿಟ್ಟು ಬರೆಯಲು ಅಸಾಧ್ಯ.
ಬರುವ ವಾಹನಗಳನ್ನು ಶುಚಿಗೊಳಿಸಿ ವಾಹನಗಳಲ್ಲೂ ಅಂತರ ಕಾಯ್ದುಕೊಳ್ಳಬೇಕು,
ಮಾಸ್ಕ್ ಧರಿಸುವಾಗ ಟವೆಲ್ ಬಟ್ಟೆತುಂಡುಗಳನ್ನು ಕಟ್ಟದೆ ಮಾಸ್ಕ್ ಗಳನ್ನೇ ಧರಿಸಬೇಕು.
(ಕಾರಣ ಟವೆಲ್ ಹಾಕಿಕೊಂಡರೆ 3 ಗಂಟೆಗಳ ಕಾಲ ಹಾಕಿಕೊಂಡಿರಲು ಸಾಧ್ಯವಾಗದು.)
ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ
ಜಾಗೃತಿ ಮೂಡಿಸುವ ನೆಪದಲ್ಲಿ ಭಯವನ್ನು ಹುಟ್ಟಿಸಬಾರದು.
ಈ ಎಲ್ಲಾ ವಿಷಯಗಳನ್ನು ಪಾಲಿಸಲು ಸಾಧ್ಯವಾದರೆ ಮಾತ್ರ ಪರೀಕ್ಷೆ ನಡೆಸಿ ಇಲ್ಲದಿದ್ದರೆ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವಂತೆ ಸರಕಾರಕ್ಕೆ ಮನವಿ ಮಾಡುತ್ತಿದ್ದೇನೆ.ಭಯದ ವಾತಾವರಣದಲ್ಲಿ ಪರೀಕ್ಷೆಯು ಕೆಲವೊಮ್ಮೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲು ಸಾದ್ಯತೆಯಿದೆ.
ನಮ್ಮ ಮಕ್ಕಳ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಮುನ್ನಡೆಯುವಂತೆ ಒತ್ತಾಯಿಸುತ್ತೇನೆ.