ಅಬುಧಾಬಿ: ಯುಎಇಯಲ್ಲಿ ವೀಸಾ ಅವಧಿ ಮುಗಿದ ನಂತರ, ಅಕ್ರಮವಾಗಿ ವಾಸಿಸುವ ವಲಸಿಗರು ದಂಡ ಪಾವತಿಸದೆ ದೇಶ ತೊರೆಯಲು ಸುವರ್ಣಾವಕಾಶ.
ಟಿಕೆಟ್ ಮತ್ತು ಪಾಸ್ಪೋರ್ಟ್ ನೊಂದಿಗೆ ನೇರವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಸಬಹುದು ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. “ಇತರ ಕ್ಷಮಾದಾನ ಕಾರ್ಯವಿಧಾನಗಳನ್ನು ಅನುಸರಿಸುವ ಅಗತ್ಯವಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 1 ರ ಮೊದಲು ವೀಸಾ ಅವಧಿ ಮುಗಿದವರಿಗೆ ಆಗಸ್ಟ್ 18 ರವರೆಗೆ ದಂಡ ಪಾವತಿಸದೆ ದೇಶ ತೊರೆಯಲು ಅವಕಾಶವಿರುತ್ತದೆ.
ಕೋವಿಡ್ ಅವಧಿ ಅಥವಾ ಮಾರ್ಚ್ 1 ರ ನಂತರ ವೀಸಾ ಅವಧಿ ಮುಗಿದವರಿಗೆ ಈ ವರ್ಷ ಡಿಸೆಂಬರ್ 31 ರವರೆಗೆ ಯುಎಇಯಲ್ಲಿ ಮುಂದುವರಿಯಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಮಾದಾನ ಪ್ರಯೋಜನವನ್ನು ಪಡೆಯಲು ಮುಂಚಿತವಾಗಿ ಇಮಿಗ್ರೇಷನ್ ಗೆ ಹೋಗಬೇಕಾದ ಅಗತ್ಯವಿಲ್ಲ. ಅವಧಿ ಮೀರದ ಪಾಸ್‌ಪೋರ್ಟ್ ಮತ್ತು ಟಿಕೆಟ್ ನೊಂದಿಗೆ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಬೇಕು.
ದುಬೈ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವವರು 48 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು. ಅಬುಧಾಬಿ, ಶಾರ್ಜಾ ಮತ್ತು ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಗಳಿಗೆ ಆರು ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಿರಬೇಕು.
ವಿಮಾನ ನಿಲ್ದಾಣದಲ್ಲಿ ಕ್ಷಮಾದಾನ ಕ್ರಮವನ್ನು ನಿರ್ವಹಿಸಲು ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕ್ಷಮಾದಾನದ ಪ್ರಯೋಜನವನ್ನು ಪಡೆಯುವವರು ಅವರ ಕುಟುಂಬ ಸದಸ್ಯರೊಂದಿಗೆ ದೇಶವನ್ನು ತೊರೆಯಲು ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.