ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ಕೆಲ ವರ್ಷಗಳಿಂದ ನಸೀಹತ್ ಕ್ಲಾಸ್ ಎಂಬ ವಾಟ್ಸಪ್ ಗ್ರೂಪ್ ಬಡವರ ಪಾಲಿನ ಅಶಾಕಿರಣ ವಾಗಿ, ನೊಂದ ಹೃದಯಕ್ಕೆ ಸಾಂತ್ವನವಾಗಿ ಕಾರ್ಯಚರಣೆ ನಡೆಸಿ, ನಾಡಿನ ಬಡ ಹಾಗೂ ಮಧ್ಯಮ ವರ್ಗದ ಜನರ ಮನಸ್ಸಿನ ಅಂತರಾಳದಲ್ಲಿ ಉತ್ತಮವಾದ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ನಾಡಿನ ಜನರು ಗುರುತಿಸಲ್ಪಡುವಂತಹ ಸಾಂತ್ವನ ರೀತಿಯಲ್ಲಿ ಬಡವರಿಗೆ ಸಹಾಯ ಸಹಕಾರವನ್ನು ನೀಡುತ್ತಾ ಮುನ್ನುಗ್ಗುತ್ತಿದೆ.
ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯಾರ್ಥ, ರಂಝಾನ್ ಕಿಟ್, ಅನಾರೋಗ್ಯದಿಂದ ಬಳಲುತ್ತಿರುವರಿಗೆ ಸಹಾಯ ಧನ, ಸಂಕಷ್ಟ ಎದುರಿಸುವವರಿಗೆ ಧನ ಸಹಾಯದ ಮೂಲಕ ಹಾಗೂ ಇನ್ನಿತರ ಹಲವಾರು ವಿಷಯದಲ್ಲಿ ಸಾಂತ್ವನ ಕಾರ್ಯದಲ್ಲಿ ನಿರತರಾಗಿ ನಾಡಿನ ಜನರ ಪ್ರಶಂಸೆಗೆ ಪಾತ್ರವಾಗುತ್ತಿದೆ.
ನಿಷ್ಕಳಂಕ ಮನಸ್ಸಿನ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಗಳು ಯಾವುದೇ ಸಂದಿಗ್ಧ ಸಂದರ್ಭದಲ್ಲಿ ಯೂ ಗ್ರೂಪ್‌ನ ಅಡ್ಮಿನ್ ಗಳು ಬಡವರ ಪರವಾಗಿ ಸಹಾಯಕ್ಕಾಗಿ ಮನವಿ ಮಾಡುವಾಗ ಗ್ರೂಪ್‌ನಲ್ಲಿ ಇರುವ ಸದಸ್ಯರು ಉತ್ತಮ ರೀತಿಯಲ್ಲಿ ಸ್ಪಂದಿಸಿ ಬಡವರ ಪಾಲಿನ ಅಶಾಕಿರಣ ವಾಗಿ ಬಹಳವಾಗಿ ಸ್ಪಂದನೆ ನೀಡುತ್ತಾ ಬಡವರ ಹಾಗೂ ಮಧ್ಯಮ ವರ್ಗದ ಜನರ ಪಾಲಿನ ಅಪಾತ್ಭಂಧವರಾಗಿದ್ದಾರೆ.
ಬಡವರ ಬಾಳು ಬೆಳಗಿಸಲು ಪ್ರಯತ್ನಿಸುವ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ಅಡ್ಮಿನ್ ಬಳಗದವರಿಗೂ ಹಾಗೂ ಸರ್ವ ಸದಸ್ಯರಿಗೂ ದೇವರು ಅರ್ಹ ಪ್ರತಿಫಲವನ್ನು ನೀಡಿ ಅನುಗ್ರಹಿಸಲಿ. ಎಂದಾಗಿದೆ ಸರ್ವ ಊರವರ ಹಾರೈಕೆ.