ಅಬುಧಾಬಿ: ಯುಎಇಗೆ ಮರಳಲು ಬಯಸುವ ವಲಸಿಗರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಝನ್ಶಿಪ್ (ಐಸಿಎ) ಈ ಬಗ್ಗೆ ನಿರ್ದೇಶನ ನೀಡಿದೆ.
ಪ್ರಾಧಿಕಾರದ ವೆಬ್‌ಸೈಟ್ ಮೂಲಕ ದೇಶಕ್ಕೆ ಮರಳಲು ಅನುಮತಿ ಲಭಿಸದವರು ತಮ್ಮ ಪ್ರಯಾಣ ಟಿಕೆಟ್‌ಗಳನ್ನು ಕಾಯ್ದಿರಿಸಬಾರದು ಎಂದು ಐಸಿಎ ತಿಳಿಸಿದೆ. ಅರ್ಜಿಯನ್ನು ಪರಿಶೀಲಿಸಲು ಕಾಲಾವಕಾಶ ಬೇಕಾಗಿದ್ದು, ಅರ್ಜಿಯನ್ನು ಪರಿಶೀಲಿಸಿದ ನಂತರ ಅನುಮತಿ ಲಭಿಸಿದ ನಂತರವೇ ಪ್ರಯಾಣ ಟಿಕೆಟ್ ಕಾಯ್ದಿರಿಸುವಂತೆ ಅಥಾರಿಟಿಯ ವೆಬ್‌ಸೈಟ್ ನಲ್ಲಿ ಪ್ರಕಟಿಸಿದ ನಿರ್ದೇಶನವನ್ನು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಯುಎಇ ನಿವಾಸ ವೀಸಾ ಹೊಂದಿರುವವರು ಜೂನ್ 1 ರಿಂದ ದೇಶಕ್ಕೆ ಮರಳಬಹುದು ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಘೋಷಿಸಿತ್ತು. ಮರಳಲು ಬಯಸುವವರು www.smartservices.ica.gov.ae ನಲ್ಲಿ ರೆಸಿಡೆಂಟ್ಸ್ ಎಂಟ್ರಿ ಪರ್ಮಿಟ್ ನೋಂದಾಯಿಸಬೇಕು.
ಯುಎಇಯಲ್ಲಿರುವ ಕುಟುಂಬ ಸದಸ್ಯರನ್ನು ಹೊಂದಿರುವವರಿಗೆ ಮೊದಲ ಆದ್ಯತೆ. ವೈದ್ಯರು ಮತ್ತು ದಾದಿಯರು ಮುಂತಾದ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳನ್ನು ಎರಡನೇ ಹಂತಕ್ಕೆ ಪರಿಗಣಿಸಲಾಗುವುದು.