janadhvani

Kannada Online News Paper

1990 -2010 ರಲ್ಲಿ ಮಿಂಚಿದ ದ.ಕ ಜಿಲ್ಲಾ ವಾಲಿಬಾಲ್ ಆಟಗಾರರ ತಂಡ

ವಾಲಿಬಾಲ್ ಕ್ರೀಡೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬಹಳ ಕುತೂಹಲ ಕಾರಿಯಾದ ಮತ್ತು ಪ್ರೇಕ್ಷಕರನ್ನು ರೋಮಾಂಚನ ಗೊಳಿಸುವಂತಹ ಕ್ರೀಡೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕ್ರೀಡೆ ಬಹಳಷ್ಟು ಜನಪ್ರಿಯತೆಯನ್ನು ಪಡೆದ ನಂಬರ್ ಒನ್ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ 1990 ರಿಂದ 2010 ರ ವರೆಗಿನ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ಹನ್ನೆರಡು ಮಂದಿ ರಾಜ್ಯಮಟ್ಟದಲ್ಲಿಯೇ ಗುರುತಿಸಿ ಕೊಂಡವರಾಗಿದ್ದಾರೆ.

ಪ್ರಮೋದ್ ವಿಟ್ಲ ಇವರೊಬ್ಬ ಸರ್ವಾಂಗೀಣ ಆಟಗಾರ ತಾವುದೇ ಸಂದರ್ಭದಲ್ಲಿ ಎದುರಾಳಿ ತಂಡವನ್ನು ತಮ್ಮ ಚಾಕಚಕ್ಕತೆಯ ಆಟದಿಂದ ಕಟ್ಟಿಹಾಕುವ ನುರಿತ ಆಟಗಾರ. ಅವರ ಆಟದ ಶೈಲಿಯನ್ನು ನೋಡುದೇ ಒಂದು ಖುಷಿ ,

ಇನ್ನು ಭಗವಾನ್ ದಾಸ್, ಇವರ ಬಲಾಡ್ಯ ಚೀನಾದ ಮಹಾ ಗೋಡೆಯಂತಹ ಗಾರ್ಡಿನ ಮುಂದೆ ಎಂತಹ ಎಟಾಕ್ ಮಾಡಿದರೂ ಫಲ ಕಾಣದು ಮತ್ರವಲ್ಲ ಉತ್ತಮ ಎಟಾಕರ್ ಕೂಡ.

ಪ್ರಶಾಂತ್ ಕುಮಾರ್ ಕೈರಂಗಳ. ಇವರೊಬ್ಬ ಸವ್ಯಸಾಚಿ ಆಟಗಾರ. ಚಿರತೆಯ ವೇಗದ ಎಟಾಕ್ ಮತ್ತು ಮೈನವಿರೇಳಿಸುವ ಡಿಫೆಂಸ್. ಸಂದರ್ಭನೋಡಿ ಡ್ರಾಪ್‌ಗಳನ್ನು ಹಾಕಿ ರಾಜ್ಯಮಟ್ಟದ ಹಾಟಗಾರರಿಗೆ ಚಳ್ಳೆಹಣ್ಣು ರುಚಿ ತೋರಿಸಿದ ಆಟಗಾರ.

ಪ್ರಶಾಂತ್ ರವರಿಗೆ ತಂಡದಲ್ಲಿ ಮತ್ತೊಂದು ಜೋಡಿ ಯಾಕೂಬ್ ಕೈರಂಗಳ.
ಯಾಕೂಬ್ ರವರ ಆಟದ ಶೈಲಿ ನೋಡಲು ಸುಂದರ ಎಂತಹ ಗಾರ್ಡರ್‌ಗಳಿದ್ದರೂ ಅವರಿಗಿಂತ ಎತ್ತರಕ್ಕೆ ಜಿಗಿದು ಚೆಂಡನ್ನು ಫಿನಿಶ್ ಮಾಡುವ ಸಾಮರ್ಥ್ಯವನ್ನು ಹೊಂದಿದವರು ಮತ್ತು ಕೊನೆಯ ಸಂದರ್ಭದವರೆಗೂ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿ ಪಂದ್ಯ ಗೆಲ್ಲಿಸಿಕೊಡುವ ಆಟಗಾರ.

ಇನ್ನು ರಾಜಾರಾಮ್ ಮತ್ತು ಇಸ್ತಿಯಾಕ್ ಇವರ ಪಾಸಿಂಗ್ ಅವರ ತಂಡಗಳಿಗೆ ಪಂದ್ಯ ಗೆಲ್ಲಿಸಿ ಕೊಡಲು ನಿರ್ಣಾಯಕ ಪಾತ್ರ ವಹಿಸುತ್ತದೆ. ಎದುರಾಳಿ ತಂಡದ ಹೊಂದಾಣಿಕೆ ನೋಡಿ ತಮ್ಮ ಎಟಾಕರ್‌ಗಳನ್ನು ಫಿನಿಶ್ ಮಾಡಿಸುವ ಚಾಣಕ್ಯರಿವರು.

ವೆಂಕಟೇಶ್ ಭಟ್ ಓರ್ವ ಸರ್ವಾಂಗೀಣ ಆಟಗಾರ ಮತ್ತು ಥಾಮಸ್ ಹಳೆಯಂಗಡಿ, ಅಮಿತ್ ಶೆಟ್ಟಿ, ಲತೀಫ್ ನಂದಾವರ,ಅಬೂಬಕ್ಕರ್ ವಿಟ್ಲ ಮತ್ತು ಬೇಬಿ ಜ್ವಾನ್ ಇವರುಗಳು ತಮ್ಮ ತಂಡಕ್ಕೆ ಜೀವ ತುಂಬುವ ಆಟಗಾರರು. ಥಾಮಸ್ ರವರ ಭೀಮಗಾತ್ರದ ಹೊಡೆತ ಮತ್ತು ಅಮಿತ್ ಶೆಟ್ಟಿಯವರ ಕ್ವಿಂಟಲ್ ಗಾತ್ರದ ಹೊಡೆತಗಳು ಎದುರಾಳಿ ತಂಡದ ನಿದ್ದೆಗೆಡಿಸುತ್ತದೆ‌.
ಲತೀಫ್ ರವರ ಬೆಚ್ಚಿಬೀಳಿಸುವ ಎಟಾಕ್ ಮತ್ತು ಕುತೂಹಲ ಕಾರಿಯಾದ ಡಿಫೆಂಸ್ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸುತ್ತೆ‌.

1990 ರಿಂದ 2010 ರವರೆಗಿನ ಇಕ್ಬಾಲ್ ಕೈರಂಗಳ ರವರ ನೆಚ್ಚಿನ ತಂಡ

ಪ್ರಮೋದ್ (ವಿಟ್ಲ)
ಭಗವಾನ್ ದಾಸ್ (ಮಂಗಳೂರು)
ಪ್ರಶಾಂತ್ ಕುಮಾರ್ ( ಕೈರಂಗಳ)
ಥಾಮನ್ (ಹಳೆಯಂಗಡಿ)
ವೆಂಕಟೇಶ್ ಭಟ್ (ದೈವಸ್ಥಳ)
ಅಮಿತ್ ಶೆಟ್ಟಿ (ಮಂಗಳೂರು)
ಯಾಕೂಬ್ (ಕೈರಂಗಳ)
ರಾಜಾರಾಮ್ ( ಮಂಗಳೂರು)
ಅಬೂಬಕ್ಕರ್ (ವಿಟ್ಲ)
ಅಬ್ಧುಲ್ ಲತೀಫ್ (ನಂದಾವರ)
ಬೇಬಿಜ್ವಾನ್ (ಪುತ್ತೂರು)
ಇಸ್ತಿಯಾಕ್ ( ಕೋಟೆಕಾರು)

ಒಟ್ಟಿನಲ್ಲಿ ಈ ಹನ್ನೆರಡು ಆಟಗಾರರು 1990 ರಿಂದ 2010 ರ ವರೆಗಿನ ಸಾಲಿನಲ್ಲಿ ಜಿಲ್ಲೆಯಲ್ಲಿ ಮಿಂಚಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಆಟಗಾರರು.

error: Content is protected !! Not allowed copy content from janadhvani.com