janadhvani

Kannada Online News Paper

ಮನೆಯಲ್ಲಿಯೇ ಈದುಲ್ ಫಿತರ್ ಆಚರಿಸಿ ಸರಳತೆಯನ್ನು ಮೆರೆದ ಮುಸಲ್ಮಾನರು

🖊️🖋️ ಇಕ್ಬಾಲ್ ಬೆಳ್ಳಾರೆ

ಮುಸ್ಲಿಮರ ಪವಿತ್ರವಾದ ರಂಝಾನ್ ತಿಂಗಳು ಕಳೆದು ಪವಿತ್ರ ದಿನವಾದಂತಹ ಈ ವರ್ಷದ ಈದುಲ್ ಫಿತರ್ ಹಬ್ಬ ಕಳೆದ ಹಲವು ವರ್ಷಗಳಲ್ಲಿ ನಾವು ಆಚರಿಸಿಕೊಂಡು ಬಂದಿದ್ದಂತಹ ಹಬ್ಬದ ರೀತಿಯಲ್ಲಿ ಅಲ್ಲ ಬದಲಾಗಿ ಪ್ರಸಕ್ತ ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ಕೋವಿಡ್-19 ಕೊರೋನಾ ವೈರಸ್ ನ ಹಾವಳಿಗಳು ದಿನಗಳೆದಂತೆ ಹೆಚ್ಚಾಗುತ್ತಿದ್ದು ಹಲವಾರು ಜೀವಗಳನ್ನು ಬಲಿತೆಗೆದಂತಹ ಹಾಗೂ ಹಲವಾರು ಮಂದಿ ಸೋಂಕು ಪೀಡಿತರಾಗಿ ಆಸ್ಪತ್ರೆಯಲ್ಲಿ ಮತ್ತು ಇನ್ನೂ ಹಲವಾರು ಮಂದಿ ಸುರಕ್ಷತೆಯ ದ್ರಷ್ಟಿಯಿಂದ ಕ್ವಾರಂಟೈನ್ ಕೇಂದ್ರ ಗಳಲ್ಲಿ ದಿನದೂಡುತ್ತಿರುವುದೆಲ್ಲವನ್ನು ಮುಸ್ಲಿಂ ಸಮುದಾಯ ಗಮನದಲ್ಲಿಟ್ಟುಕೊಂಡು ಈ ಒಂದು ಹಬ್ಬವನ್ನು ಅತ್ಯಂತ ಸರಳವಾಗಿ ಮನೆಯಲ್ಲಿಯೇ ಆಚರಿಸುವಂತಹ ಹಬ್ಬವಾಗಿ ಮಾರ್ಪಡಿಸಿದ್ದು ಶ್ಲಾಘನೀಯ.

ಕಾರಣ ಈ ಒಂದು ರೋಗವನ್ನು ತಡೆಗಟ್ಟಲು ಅಥವಾ ಈ ವೈರಸ್ ನಿಂದ ಮುಕ್ತಿ ಹೊಂದಲು ಬೇಕಾಗಿ ಕಳೆದ ಎರಡು ತಿಂಗಳಿನಿಂದ ತಮ್ಮ ಪವಿತ್ರವಾದ ರಂಝಾನ್ ತಿಂಗಳು ಬಂದ ಸಂದರ್ಭದಲ್ಲಿ ಕೂಡ ನಾವು ಮಸೀದಿಯನ್ನು ಹಾಗೂ ಸಾಮೂಹಿಕ ಪ್ರಾರ್ಥನೆಗಳನ್ನು ಬಿಟ್ಟು ಅದೇ ರೀತಿ ಪವಿತ್ರ ತಿಂಗಳಲ್ಲಿ ಅಲ್ಲಾಹು ತಆಲ ನಮಗೆ ಆಫರ್ ಆಗಿ ಕೊಟ್ಟಂತಹ ಮಸೀದಿಯಲ್ಲಿ ಸಿಗಬೇಕಾದ ಹಲವಾರು ಪುಣ್ಯ ಕರ್ಮಗಳನ್ನು ಹಾಗೂ ಸಾಮೂಹಿಕವಾಗಿ ಸಿಗಬೇಕಾದ ಪ್ರತಿಫಲಗಳೆಲ್ಲವನ್ನು ಕೂಡ ನಾವು ಬದಿಗಿಟ್ಟು ಕೊಂಡು ಮನೆಯಲ್ಲಿಯೇ ಈ ಒಂದು ಸಾಂಕ್ರಾಮಿಕ ರೋಗದಿಂದ ಮುಕ್ತಿ ಹೊಂದಲು ನಾವು ಸ್ರಷ್ಟಿಕರ್ತನಲ್ಲಿ ನಿರಂತರವಾಗಿ ಪ್ರಾರ್ಥಿಸುತ್ತಾ ಮತ್ತು ಸರ್ಕಾರದ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸಿಕೊಂಡು ಬಂದಂತಹ ವ್ಯಕ್ತಿಗಳಾಗಿದ್ದೇವೆ.
ಅದೇ ರೀತಿಯಲ್ಲಿ ಈ ಒಂದು ವರ್ಷದ ಹಬ್ಬವನ್ನು ಕೂಡ ನಾವು ಮನೆಯಲ್ಲಿ ಅತ್ಯಂತ ಸರಳವಾಗಿ ಮಾಡಿ ಮುಂದಿನ ದಿನಗಳಲ್ಲಿ ಸರಳತೆ ಪಾಲಿಸಲು ಮಾದರಿಯಾಗಿದ್ದೇವೆ.

ಪ್ರಸ್ತುತ ಬಹಳಷ್ಟು ರಾಷ್ಟ್ರಗಳಲ್ಲಿ ನಾವು ನೋಡುವುದಾದರೆ ಲಾಕ್ ಡೌನ್ ನಿಂದ ಮತ್ತು ವೈರಸ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೆ ಬಹಳಷ್ಟು ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ.ಅದೇ ರೀತಿಯಲ್ಲಿ ನಮ್ಮ ದೇಶದಲ್ಲಿ ಕೂಡ ದೇಶದ ಅಭಿವೃದ್ಧಿಯ ಬೆನ್ನೆಲುಬಾಗಿರುವ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ತೆರಳುವ ದಾರಿ ಮದ್ಯದಲ್ಲಿ ಹಸಿವಿನಿಂದ ಮತ್ತು ಅನಾರೋಗ್ಯಕ್ಕೆ ಒಳಗಾಗಿ ಸಾಯುವಂತಹ ಪರಿಸ್ಥಿತಿಯಲ್ಲೂ ಕೂಡ ಇವರನ್ನು ಕೇಳುವವರು ಯಾರು ಇಲ್ಲವೆಂಬಂತಾಗಿ ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.ಇಂತಹ ಸಂದರ್ಭದಲ್ಲಿ ನಾವು ನಮ್ಮ ಹಬ್ಬವನ್ನು ಕಳೆದ ಮೂವತ್ತು ದಿನಗಳಿಂದ ನಾವು ಹಿಡಿದಂತಹ ಉಪವಾಸವು ಅಲ್ಲಾಹನೊಟ್ಟಿಗೆ ಇಟ್ಟಂತಹ ವಿಶ್ವಾಸ ದೊಂದಿಗೆ ವಿಚಾರಧಾರೆ ಏನಿದೆ ಇದೆಲ್ಲವನ್ನೂ ಅರ್ಥೈಸಿಕೊಂಡು ಶಾಂತಿ ಸಹಬಾಳ್ವೆ ನೆಮ್ಮದಿಯ ಮತ್ತು ದಾನ ಧರ್ಮದ ಸಂಕೇತವನ್ನು ಸಾರುವ ಈ ಈದುಲ್ ಫಿತರ್ ಹಬ್ಬವನ್ನು ಬಡವರಿಗೆ ದಾನ ಧರ್ಮ ಮಾಡುವುದರ ಮೂಲಕ ಜಾತಿ ಮತ ಧರ್ಮ ಬೇದ ಮರೆತು ಎಲ್ಲರಿಗೂ ಸಹಕಾರ ನೀಡುವ ರೀತಿಯಲ್ಲಿ ನಾವು ಮನೆಯಲ್ಲಿಯೇ ಈದುಲ್ ಫಿತರ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ್ದನ್ನು ಮುಕ್ತ ಕಂಠದಿಂದ ಕೊಂಡಾಡುವಂತಾಗಿದೆ.

ಅದೇ ರೀತಿಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಮತ್ತು ರಂಝಾನ್ ಸಮಯದಲ್ಲಿ ಯಾರು ಕೂಡ ಹಸಿವು ನಿಂದ ಇರಬಾರದು ಎಂಬ ಉದ್ದೇಶದಿಂದ ಎಲ್ಲಾ ಮುಸ್ಲಿಂ ಸಾಮಾಜಿಕ ಸಂಘಟನೆಗಳು,ಪಕ್ಷಗಳು ಮತ್ತು ಮಸ್ಜಿದ್ ಜಮಾಅತ್ ಕಮಿಟಿ ಗಳು ಜಿಲ್ಲೆಯ ಮೂಲೆ ಮೂಲೆಗೂ ಕೂಡ ಜಾತಿ ಮತ ಧರ್ಮ ಭೇದ ಮಾಡದೇ ಆಹಾರ ಕಿಟ್ ಗಳನ್ನು ತಲುಪಿಸಿ ಇಸ್ಲಾಂನ ಉದಾತ್ತವಾದ ಚಿಂತನೆಗಳನ್ನು ಮೈಗೂಡಿಸಿಕೊಂಡು ಸೇವಾ ಕಾರ್ಯದಲ್ಲಿ ತೊಡಗಿಕೊಂಡದ್ದನ್ನು ಮರೆಯಲು ಅಸಾಧ್ಯ ಮತ್ತು ಅಭಿನಂದನಾರ್ಹ ವಿಚಾರ ವಾಗಿದೆ.
ಅದೇ ರೀತಿ ಹಬ್ಬವನ್ನು ಆಚರಿಸುವುದರೊಂದಿಗೆ ಇಡೀ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಈ ಒಂದು ಕೊರೋನಾ ವೈರಸ್ ನಿಂದ ಸಂಕಷ್ಟಕ್ಕೆ ಒಳಗಾದಂತಹ ಜೀವನವನ್ನು ಕಳೆದಂತಹ ಅದೇ ರೀತಿಯಲ್ಲಿ ಈ ಒಂದು ವೈರಸ್ ನಿಂದ ಪೀಡಿತರಾಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿರುವವರೆಲ್ಲರ ಮುಕ್ತಿಗೆ ಬೇಕಾಗಿ ಮತ್ತು ಸ್ವತಃ ನಮ್ಮ ಸಂರಕ್ಷಣೆಗೆ ಬೇಕಾಗಿ ಅಲ್ಲಾಹನಲ್ಲಿ ನಾವೆಲ್ಲರೂ ಈ ಒಂದು ಪುಣ್ಯ ದಿನದಲ್ಲಿ ಪ್ರಾರ್ಥಿಸೋಣ.ಸೃಷ್ಟಿಕರ್ತನು ನಮ್ಮೆಲ್ಲರನ್ನು ಈ ರೀತಿಯ ಮಾರಕ ರೋಗಗಳಿಂದ ಮುಕ್ತಿ ನೀಡಲಿ ಆಮೀನ್.
ಎಲ್ಲರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು

error: Content is protected !! Not allowed copy content from janadhvani.com