ಅಬುಧಾಬಿ: ವೀಸಾ ಅವಧಿ ಮುಗಿದು ದೇಶದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶೀಯರು ಆಗಸ್ಟ್ 18 ರೊಳಗೆ ಯುಎಇಯನ್ನು ತೊರೆಯ ಬೇಕಾಗಿದೆ. ಕಳೆದ ಸೋಮವಾರ ಈ ಕಾನೂನು ಜಾರಿಗೆ ಬಂದಿದ್ದು, ದಂಡ ರಹಿತವಾಗಿ ಈ ಅವಧಿಯಲ್ಲಿ ದೇಶವನ್ನು ತೊರೆಯಬಹುದಾಗಿದೆ.
ಈ ವರ್ಷದ ಮಾರ್ಚ್ 1 ರ ಮೊದಲು ಸಂದರ್ಶಕ ವೀಸಾ ಮತ್ತು ರೆಸಿಡೆನ್ಸಿ ವೀಸಾ ಕಾಲಾವಧಿ ಮುಗಿದು ಅನಧಿಕೃತವಾಗಿ ದೇಶದಲ್ಲಿ ಉಳಿದಿರುವವರು ಮತ್ತು ಪ್ರಾಯೋಜಕರಿಂದ ತಪ್ಪಿಸಿಕೊಂಡಿರುವವರು, ಕಾರ್ಮಿಕ ಒಪ್ಪಂದ ಮತ್ತು ಕಾರ್ಮಿಕ ಕಾರ್ಡ್ ಉಲ್ಲಂಘಿಸಿದವರಿಗೆ ಈ ಅವಕಾಶಗಳನ್ನು ಬಳಸಬಹುದು.
ಆದಾಗ್ಯೂ, ಇತರ ವೀಸಾಗಳಿಗೆ ಬದಲಾಯಿಸುವವರು ಉಲ್ಲಂಘನೆಯ ಅವಧಿಯಲ್ಲಿನ ದಂಡವನ್ನು ಪಾವತಿಸಬೇಕು. ಅವಧಿ ಮೀರಿದ ಗುರುತಿನ ಚೀಟಿ ಮತ್ತು ವೀಸಾಗಳ ದಂಡವನ್ನು ಮನ್ನಾ ಮಾಡಲಾಗಿದೆ. ವಿನಾಯಿತಿ ಪಡೆದು ಯುಎಇಯಿಂದ ನಿರ್ಗಮಿಸುವವರು ಹೊಸ ವೀಸಾದಲ್ಲಿ ಯುಎಇಗೆ ಮರಳಲು ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.