ದಮ್ಮಾಂ | ಸೌದಿಯಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಐದು ದಿನಗಳವರೆಗೆ ಪೂರ್ಣ ಪ್ರಮಾಣದ ಕರ್ಫ್ಯೂ ಘೋಷಿಸಲಾಗಿದೆ. ಮೇ 23 ರಿಂದ 27 ರ ವರೆಗೆ ಕರ್ಫ್ಯೂ ಜಾರಿರಲ್ಲಿರುತ್ತದೆ.
ಕರ್ಫ್ಯೂ ಸಮಯದಲ್ಲಿ ಸೂಪರ್ಮಾರ್ಕೆಟ್ ಮತ್ತು ಬಕಾಲಗಳು ದಿನದ 24 ಗಂಟೆಯೂ ತೆರೆದಿರುತ್ತವೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಆದರೆ,ಅವುಗಳು ಸಂಪೂರ್ಣ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ನಗರಾ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿದೆ.
ಕೇಂದ್ರ ಮಾರುಕಟ್ಟೆಗಳು ಮತ್ತು ಪೆಟ್ರೋಲ್ ಬಂಕ್ ಗಳಿಗೆ ಪೂರ್ಣ ಸಮಯದ ಕಾರ್ಯಾಚರಣೆಯ ಅನುಮತಿ ನೀಡಲಾಗಿದೆ. ಕೋಳಿ, ತರಕಾರಿ ಮತ್ತು ಜಾನುವಾರು ಮಾರಾಟ ಕೇಂದ್ರಗಳು, ಮನೆ ದುರಸ್ತಿ ಗೊಳಿಸುವ ಸಂಸ್ಥೆಗಳು, ಗೋದಾಮುಗಳು, ಅನಿಲ ಕೇಂದ್ರಗಳು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿನ ಸೇವಾ ಕೇಂದ್ರಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಕಾರ್ಯನಿರ್ವಹಿಸಲು ಅನುಮತಿ ಇದೆ.
ಕರ್ಫ್ಯೂ ದಿನಗಳಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ರೆಸ್ಟೋರೆಂಟ್ ಗಳು ತೆರೆದಿರುತ್ತದೆ. ಕಾನೂನು ಕಾರ್ಯವಿಧಾನಗಳನ್ನು ಉಲ್ಲಂಘಿಸುವ ವಿದೇಶಿಯರನ್ನು ಗಡೀಪಾರು ಮಾಡಲಾಗುವುದು ಮತ್ತು ಸೌದಿ ಅರೇಬಿಯಾಕ್ಕೆ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.